×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಲ್ಪೆ : ಕೆನರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಕೊಡವೂರು ಶಾಖೆಯ ಉದ್ಘಾಟಿಸಿದ – ಶಾಸಕ ಯಶ್‌ಪಾಲ್ ಸುವರ್ಣ

ಮಲ್ಪೆ ಎ. 16: ರಾಷ್ಟ್ರೀಕೃತ ಬ್ಯಾಂಕು ಗಳು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿ ದಂತೆಯೇ ಸಹಕಾರಿ ಕ್ಷೇತ್ರವೂ ಸಾಕಷ್ಟು ಕೊಡುಗೆ ನೀಡಿದೆ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು. ಬುಧವಾರ ಕೆನರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕೊಡವೂರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಮಾಣಿಕತೆ ಮತ್ತು ಬದ್ದತೆಯಿಂದಾಗಿ ಸಹಕಾರ ಕ್ಷೇತ್ರದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ಅಭಿವೃದ್ಧಿಸಾಧ್ಯವಾಗಿದೆ. ಕೆನರಾ ಸೊಸೈಟಿಯ ಹೊಸ ಶಾಖೆ ಯಶಸ್ವಿಯಾಗಲಿ ಎಂದು ಹಾರೈಸಿದರು. ಗ್ರಾಮೀಣ ಮಟ್ಟದಲ್ಲಿ ಸೇವೆ ಠೇವಣಿ ಪತ್ರವನ್ನು ವಿತರಿಸಿದ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಲಾವಣ್ಯ ಕೆ. ಆರ್., ಮಾತನಾಡಿ, ಆಡಳಿತ ಮಂಡಳಿಯು ಪಾರದರ್ಶಕತೆ, ನಿಷ್ಠೆಯಿಂದ ನಿರ್ವಹಿಸುತ್ತಿರುವ ಕಾರಣ ಸತತ ಲಾಭಗಳಿಸಲು ಸಾಧ್ಯವಾಗಿದೆ ಎಂದರು. ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತ ನಾಡಿ, ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಒಂದು ಒಳ್ಳೆಯ ಸೇವೆ ನೀಡುವ ಕ್ಷೇತ್ರವಾದ ಸಹಕಾರಿ ರಂಗದ ಕಡೆ ಜನರ ಒಲವು ಜಾಸ್ತಿಯಾಗಿದೆ ಎಂದರು. ಅಧ್ಯಕ್ಷತೆಯನ್ನು ಉಡುಪಿ ಕೆನರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಯು. ಮೋಹನ್ ಉಪಾಧ್ಯ ವಹಿಸಿದ್ದರು. ನಗರಸಭಾ ಸದಸ್ಯ ವಿಜಯ ಕೊಡವೂರು, ಕೊಡವೂರು ಶಂಕರ ನಾರಾಯಣ ದೇವಸ್ಥಾನದವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡ ವೂರು, ಕೊಡವೂರುಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷನಾರಾಯಣ ಬಲ್ಲಾಳ್, ಉದ್ಯಮಿ ಸಾಧು ಸಾಲ್ಯಾನ್, ಕೊಡವೂರು ಜಿ.ಎಸ್. ಕಾಂಪ್ಲೆಕ್ಸ್‌ನ ಮಾಲಕ ದಯೇಂದ್ರ ಬಂಗೇರ ಉಪಸ್ಥಿತರಿದ್ದರು.ಉಪಾಧ್ಯಕ್ಷ ವಿಜಯ್ ಎಂ. ಬಂಗೇರ, ನಿರ್ದೇಶಕರಾದ ಗಣಪತಿ ನಾಯಕ್, ಪ್ರಸಾದ್ ಕೆ.ಟಿ, ಸುಧೀರ್ ರಾವ್ ಕೊಡವೂರು ,ತುಳಸಿದಾಸ್ ಶೆಟ್ಟಿಗಾರ್ ವಸಂತಿ ನಾಯಕ್ ರಶ್ಮಿ ಸಿ ಭಟ್ ಶಿವಾನಂದ ಉಪಸ್ಥಿತರಿದ್ದರು ಕಾರ್ಯ ನಿರ್ವಹಣಧಿಕಾರಿ ಕೆ. ವಾದಿ ರಾಜ್ ಭಟ್ ವರದಿ ವಾಚಿಸಿದರು ಚಂದ್ರ ಶೇಖರ್ ರಾವ್ ನಿರೂಪಿಸಿದರು ಪ್ರಸಾದ್ ಕೆ. ಟಿ ವಂದಿಸಿದರು

Leave a Reply

Your email address will not be published. Required fields are marked *