×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ : ಐಸ್ ಕ್ರೀಮ್ ಪಾರ್ಲರ್ “ಬಬ್ಬಾಸ್ ಕೆಫೆ”ಯ ಲೋಗೋ ಅನಾವರಣ

ಉಡುಪಿ : ಅಜ್ಜರಕಾಡಿನ ಭುಜಂಗ ಪಾರ್ಕ್ ಸಮೀಪ ಐಸ್ ಕ್ರೀಮ್ ಪ್ರಿಯರಿಗಾಗಿ ನೂತನವಾಗಿ ಆರಂಭಗೊಳ್ಳಲಿರುವ ದಕ್ಷಿಣ ಕರ್ನಾಟಕದ ಅತಿ ದೊಡ್ಡ ಐಸ್ ಕ್ರೀಮ್ ಪಾರ್ಲರ್ “ಬಬ್ಬಾಸ್ ಕೆಫೆಯ” ಲೋಗೋ ಅನಾವರಣ ಕಾರ್ಯಕ್ರಮ ಉಡುಪಿಯ ಮಥುರಾ ಹೋಟೆಲ್‌ನ ಜಯ ಕೃಷ್ಣ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು

ಕಾರ್ಯಕ್ರಮದಲ್ಲಿ ಬಬ್ಬಾಸ್ ಕೆಫೆಯ ಲೋಗೋವನ್ನು ಶೀರೂರು ಸ್ವಾಮಿಗಳಾದ ಶ್ರೀವೇದವರ್ಧನ ಸ್ವಾಮೀಜಿ ಅವರು ಅನಾವರಣಗೊಳಿಸಿದರು. ಬಳಿಕ ಆಶಿರ್ವಚನ ನೀಡಿ ಸಂಸ್ಥೆಯ ಯಶಸ್ವಿಗೆ ಶುಭಹಾರೈಸಿದರುಈ ವೇಳೆ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಅವರು ಮಾತನಾಡಿ, ಈ ಐಸ್ ಕ್ರೀಮ್ ಅನ್ನು ಹಳ್ಳಿಯ ಮಕ್ಕಳು ಕೂಡ ನೆನಪಿಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಬಬ್ಬಾಸ್ ಕೆಫೆ ಎಂದು ಹೆಸರಿಡಲಾಗಿದೆ. ಬಬ್ಬಾಸ್ ಗೆ ಐಸ್ ಕ್ರೀಮ್ ಪಾರ್ಲರ್ ದಕ್ಷಿಣ ಕರ್ನಾಟಕದಲ್ಲಿ ಮೊದಲ ಅತಿ ದೊಡ್ಡ ಐಸ್ ಕ್ರೀಮ್ ಪಾರ್ಲರ್ ಆಗಿದೆ. ಇಲ್ಲಿ 58 ಬಗೆಯ ವಿವಿಧ ಐಸ್ ಕ್ರೀಮ್ ಗಳನ್ನು ಸವಿಯಬಹುದಾಗಿದೆ. ಒಂದು ಕುಟುಂಬ ಎಲ್ಲಾ ಸದಸ್ಯರು ಇಷ್ಟಪಡುವಂತಹ ವಿವಿಧ ಬಗೆಯ ಸವಿರುಚಿಯ ಐಸ್ ಕ್ರೀಮ್ ಇಲ್ಲಿ ಭ್ಯವಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಾಸ್ಯ ನಟ ಅರವಿಂದ ಬೋಳಾರ್ ಅವರು ಮಾತನಾಡಿ ಸಂಸ್ಥೆಯು ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿಯನ್ನು ಹೊಂದಿ ಕರಾವಳಿಯಾದ್ಯಂತ ಜನಪ್ರಿಯತೆಯನ್ನು ಪಡೆಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಿನ್ನಿಮೂಲ್ಕಿ ವಾರ್ಡ್‌ನ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಶಿರೂರುಮಠದ ದಿವಾನರಾದ ಸರಳತ್ತಾಯ, ಉದ್ಯಮಿ ಸುಭಾಷ್ ಅವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *