ಉಡುಪಿಯ ಪ್ರತಿಷ್ಠಿತ ನೇತ್ರಾಜ್ಯೋತಿ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿಯವರು ಕಾಲೇಜಿನ ನಿರ್ದೇಶಕಿ ಶ್ರೀಮತಿ ರಶ್ಮಿ ಕೃಷ್ಣಪ್ರಸಾದ್ ರವರಿಗೆ ‘ನೇತ್ರಾಜ್ಯೋತಿ ಉಕ್ಕಿನ ಮಹಿಳೆ’ ಎಂಬ ಬಿರುದಿನೊಂದಿಗೆ ಸಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ರಶ್ಮಿ ಕೃಷ್ಣಪ್ರಸಾದ್ ರವರು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುವಂತಾಗಬೇಕು, ಮಾತ್ರವಲ್ಲದೆ ಭವಿಷ್ಯದಲ್ಲಿ ಮಹಿಳೆಯರ ಜವಾಬ್ದಾರಿಯ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ವಕೀಲೆ ಶ್ರೀಮತಿ ಮೇರಿ ಅನ್ನೆ ಶ್ರೇಷ್ಠ ಕಾಲೇಜಿನ ಸಿ. ಓ. ಓ ಡಾ| ಗೌರಿ ಪ್ರಭು, ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ನಾಡೋಜ ಡಾ| ಕೃಷ್ಣಪ್ರಸಾದ್ ಕೂಡ್ಡು ಕಾಲೇಜಿನ ಎಚ್. ಆರ್ ತಾರಾ ಶಶಿಧರ್, ಕಾರ್ಡಿನೇಟರ್ ಶ್ರೀ ಮಾಧವ ಪೂಜಾರಿ ಉಪಸ್ಥಿತರಿದ್ದರು.

