: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ದ ಒರಿಜಿನಲ್ ಆಭರಣ ಜುವೆಲ್ಲರ್ಸ್ ಉಡುಪಿ ಸಂಸ್ಥೆಯ 1935 ರಲ್ಲಿ ನಗರದ ಸಿಬಿ ರಸ್ತೆಯಲ್ಲಿ ಆರಂಭಗೊಂಡಿದ್ದ ಆಭರಣ ಜುವೆಲ್ಲರ್ಸ್‌ನ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಅ. 21 ರಂದು ನವೀಕೃತ ಶೋರೂಂ ಪುನಾರಂಭಗೊಳ್ಳಲಿದೆ.
ಆಭರಣ ಜುವೆಲ್ಲರ್ಸ್ ಪ್ರೈವೇಟ್ ಲಿ. ಸಂಸ್ಥೆಯ ಮೊದಲ ಮಳಿಗೆಯಾಗಿರುವ ಈ ಕಟ್ಟಡವು ಸುಮಾರು 9 ದಶಕಗಳಿಗೂ ಹೆಚ್ಚು ಕಾಲ ಸಂಸ್ಥೆಯ ಇತಿಹಾಸ ಹಾಗೂ ಗುರುತಿನೊಂದಿಗೆ ಬೆಸೆದುಕೊಂಡಿದೆ. ಪ್ರಸ್ತುತ ಈ ಶೋರೂಂ ಸಂಸ್ಥೆಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಉಡುಪಿಯಲ್ಲಿ ಒಂದು ಮಳಿಗೆಯಿಂದ ಆರಂಭಗೊಂಡಿದ್ದ ಆಭರಣ ಸಂಸ್ಥೆಯ ಪಯಣ ಇಂದು ಕರ್ನಾಟಕ ಹಾಗೂ ಗೋವಾದ 8 ಜಿಲ್ಲೆಗಳಲ್ಲಿ ಒಟ್ಟು 20 ಮಳಿಗೆಗಳನ್ನು ಹೊಂದಿದ್ದು, ಗ್ರಾಹಕರ ಮನೆಮಾತಾಗಿದೆ. ಸಂಸ್ಥೆಯ ಅಧ್ಯಕ್ಷ ಮಧುಕರ್ ಕಾಮತ್ ಅವರ ದೂರದೃಷ್ಟಿಯ ಫಲವಾಗಿ ಈ ಸಂಸ್ಥೆ ಬೆಳೆದಿದ್ದು, ತನ್ನ ಭವ್ಯ ಪರಂಪರೆ ಹಾಗೂ ಗ್ರಾಹಕರೊಂದಿಗಿನ ಅನ್ನೋನ್ಯವಾಗಿರುವ ಬಾಂಧವ್ಯವನ್ನು
ಸಂಸ್ಥೆ ಉಳಿಸಿಕೊಂಡು ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಸಂಸ್ಥೆಯು ಬೆಂಗಳೂರಿನ ಜಯನಗರದ 5 ನೇ ಬ್ಲಾಕ್‌ನಲ್ಲಿ ತನ್ನ ಮೊದಲ ಹಾಗೂ ಏಕೈಕ ಅಧಿ ಕೃತ ಮಳಿಗೆಯನ್ನು ಹೊಂದಿದೆ.
ಹೊಸ ಸ್ಪರ್ಶ: ಉಡುಪಿ ನಗರದ ಸಿಬಿ ರಸ್ತೆಯಲ್ಲಿರುವ ಆಭರಣ ಜುವೆಲ್ಲರ್ಸ್‌ನ ಮಳಿಗೆಯನ್ನು ಅತ್ಯಾಧುನಿಕವಾಗಿ ನವೀಕರಿಸಿದ್ದು, ಶೋರೂಂಗೆ ಹೊಸ ಸ್ಪರ್ಶ ನೀಡಲಾಗಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ. ಕಾಮತ್ ಮಾತನಾಡಿ, ಸಿಬಿ ರಸ್ತೆಯ ಮಳಿಗೆಯೇ ನಮ್ಮ ಸಂಸ್ಥೆಯ ಬೆಳವಣಿಗೆಯ ಪಯಣಕ್ಕೆ ನಾಂದಿ ಹಾಡಿದ ಸ್ಥಳ. ಈ ಮಳಿಗೆ ಹಾಕಿಕೊಟ್ಟಿರುವ ಭದ್ರ ಬುನಾದಿಯ ಮೇಲೆ ಪ್ರತಿಯೊಂದು ಮಳಿಗೆಯೂ ವಿಸ್ತರವಾಗಿದೆ. ಗ್ರಾಹಕರಿಗೆ ನವೀಕೃತ ವಾತಾವರಣದಲ್ಲಿ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಈ ಮಳಿಗೆಯನ್ನು ಅತ್ಯಾರ್ಷಕವಾಗಿ ನವೀಕೃರಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಮಹೇಶ್ ಎಂ. ಕಾಮತ್ ಮಾತನಾಡಿ, ನಮ್ಮ ಸಂಸ್ಥೆಯ ಮೂಲ ಮೌಲ್ಯಗಳು ಹಾಗೂ ವೈಶಿಷ್ಟ್ಯವನ್ನು ಉಳಿಸಿಕೊಂಡು ಗ್ರಾಹಕರಿಗೆ ಸೇವೆ ನೀಡುವುದು ನಮ್ಮ ಆದ್ಯತೆಯಾಗಿದೆ. ಮಧುಕರ್ ಕಾಮತ್ ಅವರ ದೂರದೃಷ್ಟಿ ಇಂದಿಗೂ ನಮ್ಮ ಕಾರ್ಯಚಟುವಟಿಕೆಗಳಿಗೆ ಮಾರ್ಗದರ್ಶನವಾಗಿದೆ. ನವೀಕೃತ ಸಿಬಿ ರಸ್ತೆ ಮಳಿಗೆ ನಮ್ಮ ಪರಂಪರೆ ಮತ್ತು ಭವಿಷ್ಯದ ಬೆಳವಣಿಗೆಯ ಆಶಯಗಳ ನಡುವಿನ ಕೊಂಡಿಯಾಗಿದೆ ಎಂದು ತಿಳಿಸಿದರು
ಉಡುಪಿ ಮೂಲದ ದ ಒರಿಜಿನಲ್ ಆಭರಣ ಜುವೆಲ್ಲರ್ಸ್ ಉಡುಪಿ ಕರ್ನಾಟಕ ಮತ್ತು ಗೋವಾದಲ್ಲಿ ಅತ್ಯಂತ ಪ್ರಸಿದ್ಧವಾದ ಆಭರಣ ಬ್ರಾಂಡ್ ಆಗಿದ್ದು, ಉಡುಪಿ, ಮಂಗಳೂರು, ಬೆಂಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಗೋವಾದ ಪಣಜಿ ಮತ್ತು ಮಡಗಾಂವ್ ಸೇರಿದಂತೆ 17 ಸ್ಥಳಗಳಲ್ಲಿ ಒಟ್ಟು 20 ಮಳಿಗೆಗಳನ್ನು ಹೊಂದಿದೆ.
ಆಭರಣ ಜುವೆಲ್ಲರ್ಸ್ ಸಂಸ್ಥೆಯು ಸುದೀರ್ಘ 90 ವರ್ಷಗಳ ಇತಿಹಾಸ, ನಂಬಿಕೆಯ ಪರಂಪರೆಯನ್ನು ಹೊಂದಿದ್ದು, ನ್ಯಾಯಯುತ ಬೆಲೆಯ ಭರವಸೆ, ನೈತಿಕ ವ್ಯವಹಾರ , ಅತ್ಯುತ್ತಮ ಕರಕುಶಲತೆ ಹಾಗೂ ಗುಣಮಟ್ಟದ ಭರವಸೆ ಈ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿತವಾಗಿದೆ.

