×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸಹಕಾರಿ ಕ್ಷೇತ್ರಕ್ಕೆ ಕಳಂಕ ಬಾರದಂತೆ ಮುತುತಿವರ್ಜಿ ವಹಿಸಿ ಕೆಲಸದ ಬಗ್ಗೆ ನಿಗಾ ಇಡಬೇಕು – ಅಧ್ಯಕ್ಷ ಬಿ.ಜಯಕ‌ರ್ ಶೆಟ್ಟಿ ಇಂದ್ರಾಳಿ

ಉಡುಪಿ:. ಸಹಕಾರಿ ಕ್ಷೇತ್ರಕ್ಕೆ ಕಳಂಕ ಬಾರದಂತೆ ಮುತುತಿವರ್ಜಿ ವಹಿಸಿ ಕೆಲಸದ ಬಗ್ಗೆ ನಿಗಾ ಇಡಬೇಕೆಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ.ಜಯಕ‌ರ್ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್‌ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ಮೂಡು ಬಿದಿರೆ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಡುಪಿ ಮತ್ತು ಸಹಕಾರ ಇಲಾಖೆ ಉಡುಪಿ ಸಂಯುಕ್ರ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ವ್ಯವಸಾಯ ಸೇವಾ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಗಳಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕ ಕೆ.ಆ‌ರ್.ಲಾವಣ್ಯ ಮಾತನಾಡಿ, ಸಹಕಾರಿ ಕ್ಷೇತ್ರ ಗಣಕೀಕೃತ ಗೊಂಡಿದ್ದು, ಸಿಬ್ಬಂದಿ ತಾಂತ್ರಿಕ ನೈಪುಣ್ಯತೆಯನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ದೈನಂದಿನ ಕೆಲಸ ಕಾರ್ಯಗಳ ಜತೆಗೆ ಕಾನೂನು ತಿದ್ದುಪಡಿಯ ಅರಿವು ಮೂಡಿಸಿಕೊಂಡರೆ ಕಾರ್ಯ ಕ್ಷೇತ್ರದಲ್ಲಿ ಹುರುಪಿನಿಂದ ಕಾರ್ಯನಿರ್ವ ಹಿಸುವುದಕ್ಕೆ ಸಾಧ್ಯವಿದೆ ಎಂದರು. ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋಆಪರೇಟಿವ್ ಮ್ಯಾನೇಜ್ ಮೆಂಟ್ ಮೂಡುಬಿದಿರೆ ಪ್ರಿನ್ಸಿಪಾಲ್‌ ಡಾ.ಎಂ. ವಿಶ್ವೇಶ್ವರಯ್ಯ ಶಿವಮೊಗ್ಗ ಸಾಗರ ಸನ್ನದು ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್ ಉಪಸ್ಥಿತರಿದ್ದರು. ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಉಪನ್ಯಾಸಕ ಬಿ.ಬಿ. ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ವಂದಿಸಿದರು.

Leave a Reply

Your email address will not be published. Required fields are marked *