×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಆನೆಗುಂದಿ ಮಹಾಸಂಸ್ಥಾನದಲ್ಲಿ 22ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ: ಸೆ. 20ರಂದು ಅಷ್ಟೋತ್ತರ ಸಹಸ್ರ ಮೃತ್ತಿಕಾ ಲಿಂಗಾರ್ಚನೆ ಹಾಗೂ ಶತರುದ್ರ ಯಾಗ

ಪಡುಕುತ್ಯಾರು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ–ಪಡುಕುತ್ಯಾರು ಇಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪರಾಭವ ನಾಮ ಸಂವತ್ಸರದ 22ನೇ ವರ್ಷದ ಶ್ರೀ ಚಾತುರ್ಮಾಸ್ಯ ವ್ರತಾಚರಣೆ ಹಾಗೂ ಸುವರ್ಣ ಜನ್ಮವರ್ಧಂತಿ ವರ್ಷಾಚರಣೆ 2026–2027 ನಡೆಯುತ್ತಿದೆ.

ಇದರ ಅಂಗವಾಗಿ ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘದ ನೇತೃತ್ವದಲ್ಲಿ ಅಷ್ಟೋತ್ತರ ಸಹಸ್ರ ಮೃತ್ತಿಕಾ ಲಿಂಗಾರ್ಚನೆ, ಶತರುದ್ರ ಯಾಗ, ರುದ್ರ ಪಾರಾಯಣ ಹಾಗೂ ದಶಸಹಸ್ರ ಶಿವ ಪಂಚಾಕ್ಷರಿ ಮಂತ್ರಜಪ ಸೇರಿದಂತೆ ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಸೆಪ್ಟೆಂಬರ್ 19 ಮತ್ತು 20ರಂದು ಶ್ರೀ ಸರಸ್ವತೀ ಸತ್ಸಂಗ ಮಂದಿರ, ಪಡುಕುತ್ಯಾರಿನಲ್ಲಿ ಆಯೋಜಿಸಲಾಗಿದೆ.

ಸೆಪ್ಟೆಂಬರ್ 19ರಂದು ಬೆಳಿಗ್ಗೆ 9ರಿಂದ 11ರವರೆಗೆ ಸಂಕಲ್ಪ, ಗುರು ಗಣಪತಿ ಪೂಜೆ, ಪುಣ್ಯಾಹವಾಚನ, ಶತರುದ್ರ ಪಾರಾಯಣ ಹಾಗೂ ದಶಸಹಸ್ರ ಶಿವ ಪಂಚಾಕ್ಷರಿ ಮಂತ್ರಜಪ ನಡೆಯಲಿದೆ. ಸಂಜೆ 4ರಿಂದ 7ರವರೆಗೆ ಮಹಾನ್ಯಾಸ ಸಹಿತ ರುದ್ರ ನಮಕ–ಚಮಕ ಪಾರಾಯಣದೊಂದಿಗೆ ಅಷ್ಟೋತ್ತರ ಸಹಸ್ರ ಮೃತ್ತಿಕಾ ಲಿಂಗ ಸ್ಥಾಪನೆ ನಡೆಯಲಿದ್ದು, ರಾತ್ರಿ 7ರಿಂದ 8ರವರೆಗೆ ರಾಜೋಪಚಾರ ಪೂಜೆ, ಅಷ್ಟಾವಧಾನ ಸೇವೆ ಹಾಗೂ ತೀರ್ಥಪ್ರಸಾದ ನೆರವೇರಲಿದೆ.

ಅದೇ ದಿನ ರಾತ್ರಿ 7 ಗಂಟೆಗೆ ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ, ಕುಂಜಿಬೆಟ್ಟು, ಉಡುಪಿ ಇವರ ವತಿಯಿಂದ ‘ಜಗದ್ಗುರು ಶ್ರೀ ಶಂಕರಾಚಾರ್ಯರ ಜೀವನ ದರ್ಶನ’ ಎಂಬ ನಾಟಕ–ರೂಪಕವನ್ನು ಪ್ರಸ್ತುತಪಡಿಸಲಾಗುವುದು.

ಸೆಪ್ಟೆಂಬರ್ 20ರಂದು ಬೆಳಿಗ್ಗೆ 7 ಗಂಟೆಗೆ ಶತರುದ್ರ ಯಾಗ ಪ್ರಾರಂಭವಾಗಲಿದ್ದು, ಬೆಳಿಗ್ಗೆ 9 ಗಂಟೆಯಿಂದ ಭಸ್ಮಾರ್ಚನೆ, ಪುಷ್ಪಾರ್ಚನೆ ಹಾಗೂ ಬಿಲ್ವಾರ್ಚನೆ ನಡೆಯಲಿದೆ. ನಂತರ ಅಷ್ಟೋತ್ತರ ಸಹಸ್ರ ಮೃತ್ತಿಕಾ ಲಿಂಗಗಳ ಮಹಾಪೂಜೆ ನೆರವೇರಲಿದ್ದು, ಬೆಳಿಗ್ಗೆ 10 ಗಂಟೆಗೆ ಯಾಗದ ಪೂರ್ಣಾಹುತಿ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಮಹಾಪ್ರಸಾದ, ಕಲಶ ಪ್ರೋಕ್ಷಣೆ ಹಾಗೂ ತೀರ್ಥಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಈ ಮಹಾಪುಣ್ಯ ಕಾರ್ಯಕ್ರಮದಲ್ಲಿ ಸಮಸ್ತ ಶಿಷ್ಯವೃಂದ, ಭಕ್ತವೃಂದ ಹಾಗೂ ಸಜ್ಜನರು ಸಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಮಪೂಜ್ಯ ಜಗದ್ಗುರುಗಳವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.

ಸೇವಾ ವಿವರ: ಪೂರ್ಣಾಹುತಿ ಸಹಿತ ಸರ್ವಸೇವೆ ಹಾಗೂ ರುದ್ರಾಕ್ಷಿ ಪ್ರಸಾದ – ₹500; ಸರ್ವಸೇವೆ ಹಾಗೂ ರುದ್ರಾಕ್ಷಿ ಪ್ರಸಾದ – ₹250. ಹೊರಕಾಣಿಕೆ ಸ್ವೀಕರಿಸಲಾಗುವುದು.

ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರು ಸಾಂಪ್ರದಾಯಿಕ ಉಡುಗೆ–ತೊಡುಗೆಯಲ್ಲಿ ಆಗಮಿಸಿ ಪುಣ್ಯಭಾಗಿಗಳಾಗುವಂತೆ ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ:
6364728565 | 7795363590

ವಿನಂತಿಸಿದವರು:
ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘ, ಪಡುಕುತ್ಯಾರು
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ
ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ
ಕಟಪಾಡಿ–ಪಡುಕುತ್ಯಾರು

Leave a Reply

Your email address will not be published. Required fields are marked *