×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶರಣ್​ ಪಂಪ್​ ವೆಲ್​​ ಪೊಲೀಸ್​​ ವಶಕ್ಕೆ!

ಮಂಗಳೂರು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ನಗರದಲ್ಲಿ ಧಾರ್ಮಿಕ ಏಕತೆಗೆ ಧಕ್ಕೆ ತರುವಂತಹ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ (Social Media Post) ಕಾರಣವಾಗಿ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್‌ವೆಲ್ ರನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಈ ಬೆನ್ನಲ್ಲೇ ಕದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಯಾವುದೇ ನೋಟಿಸ್ ನೀಡದೆ ಅವರನ್ನು ಬಂಧಿಸಿದ್ದಾರೆ ಎಂದು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು RSS ಮುಖಂಡರ ಭಾಷಣದ ತುಣುಕನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣವಾಗಿದ್ದು, ದ್ವೇಷವನ್ನು ಹರಡುವ ಉದ್ದೇಶವಿದೆ ಎಂದು ಪೊಲೀಸರು ಆರೋಈ ಪ್ರಕರಣದ ಮೂಲ RSS ಮುಖಂಡರ ಒಂದು ಭಾಷಣಕ್ಕೆ ಸಂಬಂಧಿಸಿದೆ. ವಿಕಾಸ್​​ ಪುತ್ತೂರು ಎಂಬುವವರು ಆರ್ ಎಸ್ ಎಸ್ ಮುಖಂಡರ ಭಾಷಣದ ತುಣುಕು ಶೇರ್ ಮಾಡಿದ್ದರು. ಅದರಲ್ಲಿ ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45,700 ಮಕ್ಕಳು ಹುಟ್ಟಿದ್ದಾರೆ. ಅದರಲ್ಲಿ 23,200 ಮಕ್ಕಳು ಹಿಂದೂಗಳು, 22,200 ಮಕ್ಕಳು ಅಲ್ಪಸಂಖ್ಯಾತರ್ಗಳು ಎಂದು ಲೆಕ್ಕ ಹಾಕಿ, RSS ಮುಖಂಡರು ಭಾಷಣ ಮಾಡಿದ್ದರು. “ನಮ್ಮ ಜಿಲ್ಲೆಯಲ್ಲಿ 78% ಜನಸಂಖ್ಯೆ ಹಿಂದೂಗಳು, ಆದರೆ ಹುಟ್ಟಿದ ಮಕ್ಕಳು 23,000. 28% ಅಲ್ಪಸಂಖ್ಯಾತರಿಗೆ 22,000 ಮಕ್ಕಳು. ಹಾಗಾದರೆ ಇನ್ನು 15 ವರ್ಷಗಳಲ್ಲಿ ನಮ್ಮ ಊರು ಎಲ್ಲಿಗೆ ಹೋಗುತ್ತದೆ? ದೇಶ ಉಳಿಯುತ್ತಾ? ಸಮಾಜ ಉಳಿಯುತ್ತಾ? ನಾವು ಒಂದು ನಿಶ್ಚಯ ಮಾಡಬೇಕು” ಎಂದು ಅವರು ಹೇಳಿದ್ದರು.ಪಿಸಿದ್ದಾರೆ. ಈ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಹಾನಿ ಮಾಡಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ ಹಿಂದೂ, ಅಲ್ಪಸಂಖ್ಯಾತರ ಜನಸಂಖ್ಯೆ ಆಧರಿಸಿ ವಿವಾದಾತ್ಮಕ ಪೋಸ್ಟ್​!

ಈ ಭಾಷಣದ ತುಣುಕನ್ನು ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರು “ಮುಸ್ಲಿಂರ ಜನಸಂಖ್ಯೆ ಜಿಹಾದ್ ಮೆಟ್ಟಿ ನಿಲ್ಲೋಣ” ಎಂಬ ವಾಕ್ಯದೊಂದಿಗೆ ಶೇರ್ ಮಾಡಿದ್ದರು. ಇದನ್ನು ಶರಣ್ ಪಂಪ್‌ವೆಲ್ ಅವರು ಮತ್ತೊಮ್ಮೆ ಶೇರ್ ಮಾಡಿ, ಜನಸಂಖ್ಯೆ ಬೆಳವಣಿಗೆಯ ಬಗ್ಗೆ ಚರ್ಚೆಯನ್ನು ಉಂಟುಮಾಡಿದ್ದರು. ಈ ಸಂಬಂಧ ಇದೀಗ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

ಸುಮೋಟೋ ಕೇಸ್​ ದಾಖಲಿಸಿ ವಶಕ್ಕೆ!

ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿಕೊಂಡು, ಅಲ್ಪಸಂಖ್ಯಾತ ಸಮುದಾಯದಲ್ಲಿ ಆಕ್ರೋಶ ಮೂಡಿಸಿತ್ತು. ಕದ್ರಿ ಠಾಣೆಯ ನಾಗರಾಜ್ ದೂರಿನ ಆಧಾರದಲ್ಲಿ FIR ದಾಖಲಾಗಿದ್ದು, IPC ಸೆಕ್ಷನ್ 353(2) (ಪ್ರಚೋದನಕಾರಿ ಹೇಳಿಕೆಯಿಂದ ಶಾಂತಿ ಉಲ್ಲಂಘನೆ) ಅಡಿಯಲ್ಲಿ ಕ್ರಮ ತೆಗೆದಲಾಗಿದೆ. ವಿಕಾಸ್ ಪುತ್ತೂರು ಅವರು A1 ಆರೋಪಿ, ಶರಣ್ ಪಂಪ್‌ವೆಲ್ A2 ಆರೋಪಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಶರಣ್ ಅವರು ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಕಾರ್ಯವಾಹರಾಗಿ ಸೇವೆ ಸಲ್ಲಿಸುತ್ತಿದ್ದು, ಈಗಾಗಲೇ ಹಿಂದಿನ ಪ್ರಕರಣಗಳಲ್ಲಿ ಅವರ ಹೆಸರು ಬಂದಿದೆ. ಹಿಂದಿನ ವರ್ಷ ಸುಹಾಸ್ ಶೆಟ್ಟಿ ಕೊಲೆಯ ಹಿನ್ನೆಲೆಯಲ್ಲಿ ಜಿಲ್ಲಾ ಬಂದ್ ಕರೆ ನೀಡಿದ್ದಕ್ಕೂ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು

Leave a Reply

Your email address will not be published. Required fields are marked *