ಕಾಪು: ಕಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ (ಕಾಪು ಸಹಕಾರಿ ವ್ಯವಸಾಯ ಸಂಘ) ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಅವರು, ಸಂಘವು ಪ್ರಸ್ತುತ ಸಾಲಿನಲ್ಲಿ ಅತ್ಯುತ್ತಮ ಲಾಭಗಳಿಸಿದ್ದು, ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ರೈತ ಬಾಂಧವರು ಹಾಗೂ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ಈ ಯಶಸ್ಸಿನ ಕುರುಹಾಗಿ ಸಂಘದ ಸದಸ್ಯರಿಗೆ ಶೇಕಡಾ 10 (10%) ಡಿವಿಡೆಂಟ್ (ಲಾಭಾಂಶ) ಅನ್ನು ಈ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.

ಸಮಾಜಮುಖಿ ಸೇವೆಯ ಭಾಗವಾಗಿ, ಸಮಾಜದ ನೈರ್ಮಲ್ಯ ಹಾಗೂ ಸ್ವಚ್ಛತೆಗೆ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರನ್ನು ಸಂಘದ ಪರವಾಗಿ ಫಲ-ಪುಷ್ಪ, ಶಾಲಿನೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಶ್ರಮಿಕ ವರ್ಗದವರ ಸೇವೆಯನ್ನು ಗುರುತಿಸಿ ಗೌರವಿಸುವುದು ಪ್ರತಿಯೊಂದು ಸಂಸ್ಥೆಯ ಕರ್ತವ್ಯವಾಗಿದೆ ಎಂದು ದಿವಾಕರ ಶೆಟ್ಟಿ ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀ ಸುಲಕ್ಷಣ್ ಎಲ್. ಕುಮಾರ್ ಮಜೂರು ಉಪಾಧ್ಯಕ್ಷರು ನಿರ್ದೇಶಕರುಗಳಾದ ಶ್ರೀ ದಿನೇಶ್ ಎ. ಸಾಲ್ಯಾನ್ ಪಡು ಶ್ರೀ ಸುಧಾಮ ಶೆಟ್ಟಿ ಮಲ್ಲಾರು ಶ್ರೀ ಸದಾಶಿವ ಶೇರ್ವೇಗಾರ ಮಲ್ಲಾರು ಶ್ರೀ ಅಬ್ದುಲ್ ರಜಾಕ್ ಮಜೂರು ಶ್ರೀ ಭೋಜ ಎಸ್. ಅಮೀನ್ ಉಳಿಯಾರಗೋಳಿ ಶ್ರೀ ಅರುಣ್ ಕುಮಾರ್ ಶೆಟ್ಟಿ ಉಳಿಯಾರಗೋಳಿ ಶ್ರೀಮತಿ ಸವಿತಾ ಐರಿನ್ ಕುಂದರ್ ಪಾದೂರು ಶ್ರೀಮತಿ ಕವಿತಾ ಮೂಳೂರು ಶ್ರೀ ಅನುಪ್ ಕೆ. ಮಲ್ಲಾರು ಶ್ರೀ ಅರುಣ್ ಮಜೂರು ಶ್ರೀ ಬಾಲಗೋಪಾಲ್ ಬಲ್ಲಾಳ್ ವಲಯ ಮೇಲ್ವಿಚಾರಕರು ಅರ್ಚನಾ ಎಂ ಶೆಟ್ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಬ್ಬಂದಿ ವರ್ಗ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

