ಉಜಿರೆ: ಪರಮ ಪೂಜ್ಯ *ಡಾ.ಡಿ.ವೀರೇಂದ್ರ ಹೆಗ್ಗಡೆಯವರು* ಮಾರ್ಗದರ್ಶನ ದಲ್ಲಿ ನಡೆಯುತ್ತಿರುವ ರುಡ್‌ಸೆಟ್ ಸಂಸ್ಥೆ, ಉಜಿರೆಯಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ವೃತ್ತಿಪರ *ಮೇಕಪ್ ಮಾಸ್ಟರ್‌ಕ್ಲಾಸ್’* ಕಾರ್ಯಾಗಾರವು *ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಪದವೀಧರ (ಸ್ವಾಯತ್ತ) ಕಾಲೇಜು, ಉಜಿರೆ* ಇದರ ಡೀನ್ *ಡಾ. ಸೌಮ್ಯ* ಅವರು ಕಾರ್ಯಾಗಾರವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು. ಸಮಯ ಪಾಲನೆ, ಶಿಸ್ತು ಮತ್ತು ಹೊಸತನದ ಮನೋಭಾವ ಸದಾ ಇರಲಿ ಎಂದು ಶಿಬಿರಾರ್ಥಿಗಳಿಗೆ ಅವರು ಆಶಯ ನುಡಿಗಳನ್ನು ಹೇಳಿದರು.
ಅಂತರಾಷ್ಟ್ರೀಯ ಪ್ರಮಾಣೀಕೃತ ಮೇಕಪ್ ಆರ್ಟಿಸ್ಟ್, ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಹಾಗೂ ಮೇಕಪ್ ಎಜುಕೇಟರ್ ಆಗಿರುವ *ಹಾಸನದ ಶ್ರೀ ಸೋಮು ಹಾಸನ್* ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತಮ್ಮ ದೀರ್ಘ ವೃತ್ತಿ ಅನುಭವದ ಮಾತುಗಳನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು.
ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ *ಶ್ರೀ ಬಿ.ಪಿ. ವಿಜಯಕುಮಾರ್* ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತರಬೇತಿ ಪಡೆದ ನಂತರ ತಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಬ್ಯಾಂಕ್ ಸಾಲದ ಸದುಪಯೋಗ ಪಡಿಸಿಕೊಳ್ಳಿ ಎಂದು ಅವರು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಅತಿಥಿ ಉಪನ್ಯಾಸಕರಾದ *ಶ್ರೀಮತಿ ಮಾಧವಿ. ಎಂ. ರೈ* ಹಾಗೂ *ಶ್ರೀಮತಿ ಆಶಾ ಸೋಮು (ಹಾಸನ*) ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ *ಶ್ರೀ ಅಬ್ರಹಾಂ ಜೇಮ್ಸ್* ಅವರು ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ *ಶ್ರೀ ಕೆ. ಕರುಣಾಕರ ಜೈನ್* ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.
ಸಂಸ್ಥೆಯ ಸಹೋದ್ಯೋಗಿಗಳಾದ *ಶ್ರೀಮತಿ ರಶ್ಮಿ*, *ಶ್ರೀ ಪ್ರವೀಣ್ ಕುಮಾರ್*, *ಕಾಶ್ಮೀರ ಡಿ ಸೋಜಾ*, *ಸುರೇಶ*, ಸಹಕಾರಿಸಿದ್ದರು.
ಸಭೆಯಲ್ಲಿ *ಶ್ರೀ ಸೋಮು ಹಾಸನ್*, ಅವರನ್ನು ಗೌರವಿಸಲಾಯಿತು.
ಕುಮಾರಿ *ಜಲಜಾಕ್ಷಿ ಮತ್ತು ಶ್ರಾವಣಿ* ತಂಡ ಪ್ರಾರ್ಥನಾ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


