×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಚ್ಚಿಲ ಪೇಟೆಯಲ್ಲಿ ಉರಿಯದ ದಾರಿದೀಪಗಳು: ಎಸ್.ಡಿ.ಪಿ.ಐ. ಯಿಂದ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ

ಉಚ್ಚಿಲ ಪೇಟೆಯಲ್ಲಿ ಹಾದು ಹೋಗುವ ರಾಷ್ಟ್ರಿಯ ಹೆದ್ದಾರಿ 66ರಲ್ಲಿ ಆಳವಡಿಸಿರುವ ದಾರಿದೀಪ ಕಳೆದ ಹಲವು ತಿಂಗಳುಗಳಿಂದ ಕೆಲಸ ಮಾಡದೇ ಇರುವುದನ್ನು ಖಂಡಿಸಿ ಸೊಶೀಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಚ್ಚಿಲ ಗ್ರಾಮ ಸಮಿತಿವತಿಯಿಂದ ನವಯುಗ ಕಂಪೆನಿ, ಪಡುಬಿದ್ರೆ ಪೊಲೀಸ್ ಠಾಣೆ, ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ನಿಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಸ್ಥರು ಒಂದು ತಿಂಗಳ ಒಳಗಾಗಿ ದಾರಿ ದೀಪ ಹಾಕಿಸುವ ಭರವಸೆಯನ್ನು ನೀಡಿದರು.

ಈ ಸಂದರ್ಭ ಎಸ್.ಡಿ.ಪಿ.ಐ ಉಚ್ಚಿಲ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಶರೀಫ್ 313 ಉಚ್ಚಿಲ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಆಸೀಫ್ ವೈ.ಸಿ,ಎಸ್.ಡಿ.ಪಿ.ಐ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಮಜೀದ್, ಎಸ್.ಡಿ.ಟಿ. ಯು. ಕಾರ್ಯದರ್ಶಿ ಕಲೀಲ್, ಷರೀಫ್ ಸಾಗರ್ , ನವಾಝ್, ಶಂಶೀರ್ ಮತ್ತಿತರು ಉಪಸ್ಥಿತರಿದ್ದಾರು.

Leave a Reply

Your email address will not be published. Required fields are marked *