×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್ ವಿಧಿವಶ

ಉಡುಪಿ, ಸೆ.28:  ಉಡುಪಿಯ ಖ್ಯಾತ, ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್(58) ಅಲ್ಪಕಾಲದ ಅಸೌಖ್ಯದಿಂದ  ಇಂದು ಮದ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಗುರುದತ್ ಕಾಮತ್ ಅವರು ಕಳೆದ ಒಂದು ವಾರಗಳಿಂದ ಕಿಡ್ನಿ ವೈಫಲ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು.  ದೇಶ ವಿದೇಶಗಳಲ್ಲಿ ಅನೇಕ ಛಾಯಾಚಿತ್ರಗಳನ್ನು ತನ್ನ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದು ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದ ಇವರು, ಯುವ ಛಾಯಾಗ್ರಾಹಕರು ಇವರನ್ನು ಗುರುಸ್ಥಾನದಲ್ಲಿ ಕಾಣುತ್ತಿದ್ದರು.  ತಮ್ಮ ಕೈಚಳಕದ ಛಾಯಾಚಿತ್ರಗಳಿಗೆ ದೇಶ ವಿದೇಶಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.  ಶಿರೂರು ಶ್ರೀಗಳ ಪರ್ಯಾಯದ ಸಮಯದಲ್ಲಿ ದಿನ ನಿತ್ಯವೂ ಶ್ರೀ ಕೃಷ್ಣ ಪರಮಾತ್ಮನ ಅಲಂಕಾರದ ಛಾಯಾಚಿತ್ರಗಳನ್ನು ಹಾಗೂ ಶ್ರೀ ಕೃಷ್ಣ ಮಠದ ಎಲ್ಲಾ ಉತ್ಸವದ, ಹರಿ ಹಬ್ಬದ ದಿನಗಳ ಛಾಯಾಚಿತ್ರಗಳನ್ನು ಭಗದ್ಭಕ್ತರಿಗೆ ತಲುಪಿಸುತ್ತಿದ್ದ, ಶ್ರೀ ಕೃಷ್ಣ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

Leave a Reply

Your email address will not be published. Required fields are marked *