×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬ್ರಹ್ಮಾವರ : ಸ್ಟಾಕ್ ಯಾರ್ಡ್‌ನಲ್ಲಿ ನಿಲ್ಲಿಸಿರುವ ಗೂಡ್ಸ್‌ ವಾಹನಗಳ ಸೈಲೆನ್ಸರ್ ಕಳವು- ಪ್ರಕರಣ ದಾಖಲು

ಬ್ರಹ್ಮಾವರ ಉಪ್ಪರು  ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ವಾಹನಗಳ ಸ್ಟಾಕ್ ಯಾರ್ಡ್‌ನಲ್ಲಿ ನಿಲ್ಲಿಸಿರುವ ಮೂರು ಗೂಡ್ಸ್ ವಾಹನಗಳ 2.10 ಲಕ್ಷ ರೂ. ಮೌಲ್ಯದ ಸೈಲೆನ್ಸರ್ ನ್ನು ಕಳವು ಮಾಡಿಕೊಂಡು ಘಟನೆ ನಡೆದಿದೆ. ಆಭರಣ ಮೋಟಾರ್ಸ್ ಮಾರುತಿ ಶೋ ರೂಮ್ ನ ಸೆಕ್ಯೂರಿಟಿ ಸೂಪ‌ವೈಸರ್ ಸುರೇಶ್ ದೇವಾಡಿಗ ಅವರು ಬ್ರಹ್ಮಾವರದ ಉಪೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮಾರುತಿ ಕಾರುಗಳ ಸ್ಟಾಕ್ ಯಾರ್ಡ್‌ನಲ್ಲಿ ನಿಲ್ಲಿಸಲಾಗಿರುವ ಶೋ ರೂಮ್‌ನ ವಾಹನಗಳನ್ನು ತಿಂಗಳಿಗೊಮ್ಮೆ ಪರಿಶೀಲನೆ ಮಾಡುತ್ತಿದ್ದರು.ಅದರಂತೆ ನಿನ್ನೆ ಮಧ್ಯಾಹ್ನ 3: 30 ರ ಸುಮಾರಿಗೆ ಟೆಕ್ನಿಶೀಯನ್ ಕಾರುಗಳನ್ನು ಚೆಕ್ ಮಾಡುವಾಗ ನೊಂದಣಿ ಆಗದೇ ಇರುವ ಮೂರು ಮಾರುತಿ ಸೂಪರ್ ಕ್ಯಾರಿ ಗೂಡ್ಸ್‌ ವಾಹನಗಳ ಸೈಲೆನ್ಸರನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ. ಕಳವಾದ ಮೂರು ಸೈಲೆನ್ಸರ್ ಗಳ ಒಟ್ಟು ಮೌಲ್ಯ 2,10, 000 ರೂ. ಆಗಿರುತ್ತದೆ ಎಂಬುದಾಗಿ ಸುರೇಶ್ ದೇವಾಡಿಗ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *