×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಬಿತ್ತಿಚಿತ್ರ ಅನಾವರಣ

ಉಡುಪಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಮೇ 3ರಂದು ಡಾ. ಭಾಸ್ಕರಾನಂದ ಕುಮಾರ್ ಸರ್ವಾಧ್ಯಕ್ಸತೆಯಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ನಡೆಯಲಿದ್ದು, ಇದರ ಪ್ರಚಾರಾದ ಬಿತ್ತಿ ಚಿತ್ರ ವನ್ನು ಮಾನ್ಯ ಉಡುಪಿ ಶಾಸಕ ಯಶ್ ಪಾಲ ಸುವರ್ಣರವರು ಲೋಕಾರ್ಪಣೆಗೊಳಿಸಿ ಕಸಾಪ ಉಡುಪಿ ತಾಲೂಕು ಘಟಕವು ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸುತ್ತಾ ಕನ್ನಡಿಗರ ಮನೆ ಮಾತಾಗಿದೆ ಎಂದರು. ಸಮ್ಮೇಳನಕ್ಕೆ ನಾನು ಬರುವೆ, ನೀವೆಲ್ಲರೂ ಬನ್ನಿ ಎಂದು ಸಾರ್ವಜನಿಕರಿಗೆ ಕರೆ ಇತ್ತರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್ ಪಿ , ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸಮ್ಮೇಳನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕೊಡವೂರು, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು , ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್ ಮಹಿಳಾ ಪ್ರತಿನಿಧಿ ಅನಿತಾ ಸಿಕ್ವೇರಾ, ಸದಸ್ಯರಾದ ದೀಪ ಕರ್ಕಿ, ಪ್ರಸನ್ನ ಕುಮಾರ್ ಹಿರೇಮಠ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *