ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯ ಲಿರುವ ದಸರಾ ಮಹೋತ್ಸವ- 2025ಕ್ಕೆ ಸೋಮ ವಾರ ಬೆಳಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಸಹಿತ ಒಂಬತ್ತು ಸುಮಂಗಲೆಯರು ಏಕಕಾಲ ದಲ್ಲಿ ಒಂಬತ್ತು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಹೊಸದಿಲ್ಲಿಯ ಉದ್ಯಮಿ ನೀರಾ ರಾಡಿಯ, ದಾನಿಗಳಾದ ಮುಂಬಯಿಯ ತುಂಗಾ ಗ್ರೂಪ್ ಆಫ್ ಹೋಟೆಲ್ಸ್‌ನ ನಿರ್ದೇಶಕಿ ರಂಜನಿ ಸುಧಾಕರ್ ಹೆಗ್ಡೆ ಅಮ್ಮಣ್ಣಿ ಜಯರಾಜ್ ಹೆಗ್ಡೆ ಕೊರಂಗ್ರ ಪಾಡಿ, ಕಾಪು ದೇವಿಪ್ರಸಾದ್ ಕನ್‌ಸ್ಟ್ರಕ್ಷನ್ ಪೈ.ಲಿ.ನ ನಿರ್ದೇ ಶಕಿ ಬೀನಾ ವಾಸುದೇವ ಶೆಟ್ಟಿ ಉಡುಪಿ ಸಾಯಿರಾಧಾ ಗ್ರೂಪ್‌ನ ನಿರ್ದೇಶಕಿ ಅನುರಾಧ ಮನೋಹರ್ ಶೆಟ್ಟಿ ಮುನಿಯಾಲ್ ನೇಚರ್ಸ್ ಡಿವೈನ್ ಸೆಂಟರ್(ಗೋಧಾಮ) ಟ್ರಸ್ಟಿ ಸವಿತಾ ರಾಮಕೃಷ್ಣ ಆಚಾರ್ ದೀಪ ಬೆಳಗಿ ಉದ್ಘಾಟಿಸಿದರು. ಉದ್ಘಾಟನೆ ನೆರವೇರಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಮಾತನಾಡಿ ಸರಕಾರದ ಆರ್ಥಿಕ ಸಹಾಯವಿಲ್ಲದೆ ಇಷ್ಟು ದೊಡ್ಡ ದೇವಸ್ಥಾನ ನಿರ್ಮಿಸಿ ಜಗತ್ತಿನ 18 ದೇಶಗಳಲ್ಲಿ ಇಲ್ಲಿನ ದೀಪ ವನ್ನು ಹಚ್ಚಿರುವುದು ಈ ಕ್ಷೇತ್ರದ ಮಹತ್ವವನ್ನು ತಿಳಿಸುತ್ತದೆ. ಕ್ಷೇತ್ರದ ನವದುರ್ಗಾ ಲೇಖನ ಯಜ್ಞದಲ್ಲಿ ನಾನೂ ಪುಸ್ತಕ ಬರೆದು ಸೇರ್ಪಡೆಗೊಳ್ಳುತ್ತಿದ್ದೇನೆ ಎಂದರು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಕಾರ್ಯಾ ಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗೌವಾಧ್ಯಕ್ಷ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ ಡಾ.ಮಾಧವ ಆರ್. ಪಾಲನ್, ಮನೋಹರ್ ಎಸ್.ಶೆಟ್ಟಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾ ಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಸದಸ್ಯರಾದ ಶೇಖರ್ ಸಾಲ್ಯಾನ್, ಮನೋಹರ್ ರಾವ್ ಕಲ್ಯ, ರವೀಂದ್ರ ಮಲ್ಲಾರು, ಜಯ ಲಕ್ಷ್ಮೀ ಎಸ್.ಶೆಟ್ಟಿ ಚರಿತಾ ದೇವಾಡಿಗ, ದಾನಿ ಸುಧಾಕರ್ ಹೆಗ್ಡೆ ತುಂಗಾ, ಮ್ಯಾನೇಜರ್ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ ವಂದಿಸಿದರು. ಪುರೋ ಹಿತ್ ದಾಮೋದರ ಶರ್ಮ ಬಾರ್ಕೂರು ನಿರೂಪಿಸಿದರು.ಕ್ಷೇತ್ರದ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಸಹಕಾರದೊಂದಿಗೆ ಶ್ರೀ ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಲಾಯಿತು.

