×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಗೋವುಗಳ ನೋವಿಗೆ ಮರುಗಿದ ಪದ್ಮರಾಜ್

ಕೆಂಜಾರು ಗೋಶಾಲೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ 500ಕ್ಕೂ ಅಧಿಕ ಗೋವುಗಳು… ಆಳುದ್ದದ ಹಟ್ಟಿಯಲ್ಲಿ ಸಾವಕಾಶವಾಗಿ ನಿಲ್ಲಲು ಜಾಗವೇ ಇಲ್ಲ. ಇನ್ನು, ಮೇವು ಮೇಯಲು ಜಾಗವೆಲ್ಲಿ, ಆರೋಗ್ಯಪೂರ್ಣವಾಗಿ ದಿನ ನಿರ್ವಹಣೆಯ ಮಾತೆಲ್ಲಿ, ತಳಿ ಅಭಿವೃದ್ಧಿ ಮಾಡಲು ಕೇಂದ್ರವೆಲ್ಲಿ… ಇದು ಮಂಗಳೂರಿನ ಬಜ್ಪೆ ಕೆಂಜಾರು ಕಪಿಲಾ ಪಾರ್ಕ್ ಗೋಶಾಲೆಯ ಕಥೆ – ವ್ಯಥೆ. ಲೋಕಸಭಾ ಚುನಾವಣೆಯ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಶುಕ್ರವಾರ ಸಂಜೆ ಕಪಿಲಾ ಪಾರ್ಕ್ ಗೋಶಾಲೆಗೆ ಭೇಟಿ ನೀಡಿದರು. ನಿಲ್ಲಲು ಜಾಗವಿಲ್ಲದೇ ಒಂದರ ತಲೆ ಇನ್ನೊಂದು ಗೋವಿನ ಮೇಲೆ ಇರುವಂತೆ ಆಹಾರ ಮೇಯುತ್ತಿದ್ದ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದರು. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಂಬಂಧಪಟ್ಟ ಅಧಿಕಾರಿ ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಒಟ್ಟು 36 ಸೆಂಟ್ಸ್ ಜಾಗದಲ್ಲಿ 500ಕ್ಕೂ ಅಧಿಕ ಗೋವುಗಳು ನಿಲ್ಲಲಾಗದೇ ಹೊರಗೋಡಿ ಬರಲು ತವಕಿಸುತ್ತಿದ್ದವು. ಹಟ್ಟಿಯ ಹೊರಗಡೆ ಎಳೆ ಕರುಗಳು ದಿಕ್ಕು ಕಾಣದೆ ನಿಂತಿದ್ದವು. ಗೋಶಾಲೆಯ ಪ್ರಕಾಶ್ ಅವರು ಗೋಶಾಲೆಯ ದೈನವೀ ಪರಿಸ್ಥಿತಿಯನ್ನು ವಿವರಿಸಿದರು. ಹಿಂದೂ ಪ್ರತಿಪಾದಕರು ಎಂದು ಹೇಳಿಕೊಂಡವರು ಭರವಸೆ ನೀಡಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡರು.

Leave a Reply

Your email address will not be published. Required fields are marked *