×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಇನ್ನಂಜೆ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ‘ಗಾಂಧಿ ಭಾರತ’ ಸಮಾವೇಶ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನಿರ್ದೇಶನದಂತೆ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗುವ, “ಗಾಂಧೀ ಭಾರತ “, ಬೃಹತ್ ಸಮಾವೇಶದ ಕುರ್ಕಾಲು ಇನ್ನಂಜೆ ದಾಸಭವನದಲ್ಲಿ ಮೇ 27 ರಂದು ಆಯೋಜಿಸಲಾಗಿದ್ದ ಗಾಂಧಿ ಭಾರತ ಬೃಹತ್ ಸಮಾವೇಶವನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾ‌ರ್ ಸೊರಕೆ ಅವರು ಉದ್ಘಾಟಿಸಿದರು: ಬಳಿಕ ಮಾತನಾಡಿದ ಅವರು ಯಾವುದೇ ಸಂದರ್ಭದಲ್ಲಿಯೂ ಸಂವಿಧಾನವು ಪ್ರತಿಪಾದಿಸಿದ ಶ್ರೇಷ್ಠ ಮೌಲ್ಯಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಹೊಣೆ ನಮ್ಮ ಮುಂದಿದೆ. ಗಾಂಧೀಜಿ ಅಂಬೇಡ್ಕರವರ ಆಶಯಗಳನ್ನು ಗೌರವಿಸುತ್ತಾ, ಅವರ ಆಶಯದಂತೆ ದೇಶವನ್ನು ಮುನ್ನಡೆಯಬೇಕು ಕಾಂಗ್ರೆಸ್ ಪಕ್ಷ ಹೋರಾಟ, ತ್ಯಾಗ, ಬಲಿದಾನಗಳಿಂದ ಕಟ್ಟಿದ್ದಾಗಿದೆ.ಎಂದು ಅವರು ತಿಳಿಸಿದರು., ಕೆಪಿಸಿಸಿ ಮಾಧ್ಯಮ ವಕ್ತಾರ, ಸುಧೀರ್ ಕುಮಾರ್ ಮುರೊಳ್ಳಿ ದಿಕ್ಕೂಚಿ ಭಾಷಣ ಮಾಡಿದರು ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ನೀತಿ ನಿರ್ವಹಣ ಸಮಿತಿಯ ಸಂಚಾಲಕ ಅಮೃತ್ ಶೆಣೈ, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜಿ. ಶೆಟ್ಟಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ ಕಾಪು ಬ್ಲಾಕ್ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪಕ್ಷದ ಪ್ರಮುಖರಾದ ಪ್ರಶಾಂತ್ ಜತ್ತನ್ನ ಶರ್ಪುದ್ದೀನ್ ಶೇಖ್, ಗೀತಾ ವಾಗ್ಲೆ, ಶಾಂತಲತಾ ಶೆಟ್ಟಿ, ಗೌರೀಶ್ ಕಟಪಾಡಿ, ರಾಜೇಶ್ ಶೆಟ್ಟಿ ಪಾಂಗಾಳ, ಐಡಾ ಗಿಬ್ಬ ಡಿ’ಸೋಜಾ, ಅನಿತಾ ಡಿ’ಸೋಜಾ ಬೆಳ್ಳಣ್, ಹಸನಬ್ಬ ಶೇಖ್ ಶಿರ್ವ, ರಾಘವ ಕೋಟ್ಯಾನ್ ಶೇಖಬ್ಬ ಉಚ್ಚಿಲ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು. ಪಕ್ಷದ ಮುಖಂಡೆ ಮಾರ್ಗರೆಟ್ ಸೀಮಾ ಡಿ’ಸೋಜಾ ಸ್ವಾಗತಿಸಿದರು. ಸುಮಲತಾ ಇನ್ನಂಜೆ ನ್ನು ಸಂವಿಧಾನ ಪೀಠಿಕೆ ಭೋದಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ನಿಯಾಜ್ ಪಡುಬಿದ್ರಿ ವಂದಿಸಿದರು. ಕಾಪು ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಕಾಪು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *