×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪ್ರಸಾದ್‌ರಾಜ್ ಕಾಂಚನ್ ವಿರುದ್ಧ ಸುಳ್ಳು ಸುದ್ದಿ ಪೋಸ್ಟ್ -ಕಠಿಣ ಕ್ರಮಕ್ಕೆ ಎಸ್ಪಿಗೆ ಮನವಿ

ಉಡುಪಿ: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಜರುಗಿದ “ಉಡುಪಿ ಉಚ್ಚಿಲ ದಸರಾ ಕಾರ್ಯಕ್ರಮ ದಲ್ಲಿ ಮುಸ್ಲಿಂ ವ್ಯಕ್ತಿಗೆ ಸನ್ಮಾನ ಮಾಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾದ್ ರಾಜ್ ಕಾಂಚನ್ ರವರ ಫೋಟೋವನ್ನು ದುರುದ್ದೇಶ ಪೂರಕವಾಗಿ ಎಡಿಟ್ ಮಾಡಿ ಕೋಮುದ್ವೇಷ ಹಾಗೂ ಮಾನಹಾನಿ ಪೋಸ್ಟ್ ಮಾಡಿದವರ ಬಗ್ಗೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್, ಉಡುಪಿ ಕಾಂಗ್ರೆಸ್ ಕಾರ್ಯಕರ್ತರು, ಪ್ರಸಾದರಾಜ್ ಕಾಂಚನ್ ಅಭಿಮಾನಿಗಳಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಾವರ ಬ್ಲಾಕ್ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ನವೀನ್ ಮರಕಲ,ಬ್ರಹ್ಮಾವರ ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ಕುಮಾ‌ರ್ ಸುವರ್ಣ ಬೈಕಾಡಿ, ರಾಜ್ಯ ಮೀನುಗಾರರ ಕಾಂಗ್ರೆಸ್ ಪದಾಧಿಕಾರಿಗಳಾದ ರಮೇಶ್ ತಿಂಗಳಾಯ,ಅಖಿಲೇಶ್ ಕೋಟ್ಯಾನ್ ಕಟಪಾಡಿ,ಮುಖಂಡರುಗಳಾದ ವಿಶ್ವಾಸ್ ಅಮೀನ್, ಮನೋಜ್ ಕರ್ಕೇರ, ಉಪೇಂದ್ರಮೆಂಡನ್, ನಾಗೇಂದ್ರ ಮೆಂಡನ್,ಪಾಂಡುರಂಗ ಕೋಟ್ಯಾನ್, ಸಂತೋಷ್ ಪಡುಬಿದ್ರಿ, ರಾಮಪ್ಪ ಸಾಲಿಯಾನ್, ಸುದರ್ಶನ್, ಆನಂದ ಕಾಂಚನ್, ಪದ್ಮನಾಭ ಬಂಗೇರ, ಕಿರಣ್ ಕುಮಾರ್, ಸುಧೀರ್ ಶೆಟ್ಟಿ, ವಿಲಾಸ್, ಮಾದವ, ಸೂರಜ್,ಬಂಧು ಕಾಂಚನ್,ಶರತ್ ಕುಂದರ್,ಸತೀಶ್ ಸಾಲ್ಯಾನ್, ರತ್ನಾಕರ ಮೊಗವೀರ ಹಾವಂಜೆ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *