ಉಡುಪಿ: ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂ ದೌರ್ಜನ್ಯದ ವಿರುದ್ಧ ಪ್ರತಿಭಟನಾ ಸಭೆಯನ್ನು ಹಿಂದೂ ಹಿತ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ಸಭೆಯಲ್ಲಿ ಆನೆಗುಂದಿ ಮಠದ ಶ್ರೀ ಕಾಳಹಸ್ತೀಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, “ಪಕ್ಷ ರಹಿತವಾಗಿ, ಜಾತಿ ರಹಿತವಾಗಿ ಹಿಂದೂಗಳು ಒಟ್ಟಾಗಬೇಕು. ಬಾಂಗ್ಲಾ ರಲ್ಲಿ ಹಿಂಸಾಚಾರ ಆಗುವಾಗ ಇಲ್ಲಿ ಕ್ರಿಕೆಟ್ ನಡೀತಾ ಇತ್ತು. ನಮ್ಮ ದೇಶದ ಜನರಿಗೆ ಏನಾಗಿದೆ? ಬಾಂಗ್ಲಾ ದೊಂದಿಗೆ ವ್ಯಾಪಾರ ಸಂಬಂಧ ತಟಸ್ಥ ಮಾಡಬೇಕು ಎಂದರು. “ಹಿಂದೂ ರಕ್ಷಣೆ ಇಲ್ಲದಿದ್ದರೆ ಸಹಕಾರ ಇಲ್ಲ ಎನ್ನುವ ಸಂದೇಶ ಹೋಗಬೇಕು.ನಮ್ಮ ದೇಶದಲ್ಲಿ ಶೇ.80 ಹಿಂದೂಗಳಿದ್ದು ಏನು ಪ್ರಯೋಜನ?.ಎಲ್ಲೋ ಬಾಂಗ್ಲಾದಲ್ಲಿದೆ ಎಂದು ಕೂತರೆ , ನಮ್ಮಲ್ಲೂ ಈ ಸಮಸ್ಯೆ ಬರುವ ದಿನ ದೂರವಿಲ್ಲ . ನಾವೆಲ್ಲರೂ ಸೇರಿ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು. ಇಸ್ರೇಲ್ ಯುದ್ಧ ಮಾಡಿದರೆ ಹ್ಯಾಶ್ ಟ್ಯಾಗ್ ಮಾಡಿ ವೈರಲ್ ಮಾಡ್ತಾರೆ. ನಾವ್ಯಾಕೆ ಸುಮ್ಮನಿದ್ದೆವೆ. ಸೇವ್ ಬಾಂಗ್ಲಾ ಹಿಂದೂಸ್ ಒಂದು ಹ್ಯಾಶ್ ಟ್ಯಾಗ್ ಯಾಕೆ ಮಾಡಲ್ಲ? ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರಕ್ಕೆ ಕಾರ್ಡ್ ಚಳುವಳಿ ಮಾಡಿ. ಪ್ರತಿ ಮನೆಯಿಂದ ಕಾರ್ಡ್ ಹೋಗಬೇಕು. ಬಾಂಗ್ಲಾ ಅಲ್ಲಿ ಇರುವುದು ಸರ್ಕಾರವಲ್ಲ.. ಜಂಗಲ್ ರಾಜ್. ಅದು ಚುನಾಯಿತ ಸರ್ಕಾರ ಅಲ್ಲ ..ಜಂಗಲ್ ರಾಜ್. ಬಾಂಗ್ಲಾ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಸಂಸ್ಥೆಗಳು ಮಾನ್ಯತೆ ಕೊಡಬಾರದು.ಹಿಂದೂಗಳ ಜೊತೆ ಭಾರತ ಇದೆ ಎಂಬ ಸಂದೇಶ ಹೋಗಬೇಕು ಎಂದು ಹೇಳಿದರು. ನಮ್ಮಲ್ಲಿ ಹಿಂದುಗಳ ಸಂಖ್ಯೆ ಇಳಿಯಲು ಬಿಡಬೇಡಿ. ಹಿಂದೂಗಳು ಬಹುಸಂಖ್ಯಾತರಾಗಿ ಇರುವುದರಿಂದ ಈ ದೇಶದಲ್ಲಿ ಶಾಂತಿ ಇದೆ. ಹಿಂದುಗಳು ಅಲ್ಪಸಂಖ್ಯಾತರಾದರೆ ಇನ್ನೊಂದು ಬಾಂಗ್ಲಾ ಆಫ್ಘಾನಿಸ್ತಾನ ಆಗುತ್ತೆ.ಸಭೆಯಲ್ಲಿ ಅನೇಕ ಹೆಣ್ಣುಮಕ್ಕಳಿದ್ದಿರಿ.ಕಷ್ಟ ಪುತ್ರವತಿ ಭವ ಎನ್ನುತ್ತಾರೆ. ವೇದದ ನುಡಿಯಂತೆ ಅಷ್ಟ ಅಲ್ಲದಿದ್ದರೂ ನಾಲ್ಕು ಮಕ್ಕಳನ್ನಾದರೂ ಹೇರಬೇಕು ಎಂದು ಕರೆ ನೀಡಿದರು. ಒಂದು ಮನೆಗೆ, ಒಂದು ದೇಶಕ್ಕೆ, ಒಂದು ಸಮಾಜಕ್ಕೆ, ಇನ್ನೊಂದು ಧರ್ಮಕ್ಕೆ.ನಾಲ್ಕು ಮಕ್ಕಳು ಪ್ರತಿ ಮನೆಯಲ್ಲೂ ಈ ಕಾರ್ಯಗಳಿಗೆ ಮೀಸಲಿರಬೇಕು.ನಮ್ಮ ಮಕ್ಕಳನ್ನು ನಾವು ಆಸ್ತಿ ಮಾಡುವುದು …ಆ ಆಸ್ತಿಯನ್ನು ಅನುಭವಿಸಲು ಅವರು ಮಕ್ಕಳನ್ನು ಹುಟ್ಟಿಸುವುದು. ಹಿಂದುಗಳ ಸಂಖ್ಯೆ ದೇಶದಲ್ಲಿ ಹೆಚ್ಚಬೇಕು.ಕೆಲವರು ಒಂದು ಮಕ್ಕಳನ್ನು ಕೂಡ ಪಡೆಯುವುದಿಲ್ಲ.ಇಲ್ಲದೇ ಇದ್ದರೆ ಭಾರತ ಬೇರೆ ರಾಷ್ಟ್ರ ಆಗುತ್ತೆ ಎಂದರು. ನಿರಂತರ ಪ್ರತಿಭಟನೆ ನಡೆಯಬೇಕು. ಉಗ್ರ ಹೋರಾಟ ಮಾಡಬೇಕು ಉಗ್ರ ಎಂದರೆ ಕಲ್ಲು ಹೊಡೆಯುವುದಲ್ಲ. ಅನ್ನ ಕೊಟ್ಟರೆ ಸ್ವರ್ಗಕ್ಕೆ ಹೋಗುತ್ತೇವೆ ಅನ್ನುವುದು ನಮ್ಮ ಸಂಪ್ರದಾಯ.ಕಾಫಿರರಿಗೆ ಕಲ್ಲು ಹೊಡೆದರೆ ಸ್ವರ್ಗಕ್ಕೆ ಹೋಗುವುದು ನಮ್ಮ ಸಂಪ್ರದಾಯ ಅಲ್ಲ. ಶಾಂತಿಯುತ ಪ್ರತಿಭಟನೆಯ ಮೂಲಕ ಸರ್ಕಾರವನ್ನು ಎಚ್ಚರಿಸೋಣ ಎಂದು ಹೇಳಿದರು. ಪ್ರತಿಭಟನಾ ಸಭೆಯ ಮುನ್ನ ಜೋಡುಕಟ್ಟೆಯಿಂದ ನಗರದ ಪ್ರಮುಖ ಮಾರ್ಗವಾಗಿ ಕೃಷ್ಣ ಮಠ ಪಾರ್ಕಿಂಗ್ ವರೆಗೆ ಜಾಥ ಹಮ್ಮಿಕೊಳ್ಳಲಾಗಿತ್ತು. ಜಾಥ ಮತ್ತು ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

