×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಟೆನ್ನಿಸ್ ಬಾಲ್ ರಂಗಕ್ಕೆ ತುಂಬಲಾಗದ ನಷ್ಟ – ವಿನ್ಸೆಂಟ್ ಪಡುಬಿದ್ರಿ ಇನ್ನಿಲ್ಲ

ರಾಜ್ಯಮಟ್ಟದ ಪ್ರತಿಷ್ಠಿತ ತಂಡ ಶರತ್ ಶೆಟ್ಟಿಯವರ ನೇತೃತ್ವದ “ಪಡುಬಿದ್ರಿ ಫ್ರೆಂಡ್ಸ್” ಕ್ರಿಕೆಟ್ ತಂಡದ ಆಧಾರಸ್ತಂಬ ಸವ್ಯಸಾಚಿ, ತಂಡದ ಜಯಗಳಲ್ಲಿ ಪ್ರಮುಖ ಪಾತ್ರವಹಿಸಿದ ವಿನ್ಸೆಂಟ್ ಫೆರ್ನಾಂಡಿಸ್ (ವಿನ್ಸಿ) (48) ಅವರು ಇಹಲೋಕ ತ್ಯಜಿಸಿದ್ದಾರೆ. ಕರಾವಳಿ ಮತ್ತು ರಾಜ್ಯದ ಪ್ರತಿಷ್ಠಿತ ಪಡುಬಿದ್ರೆ ಫ್ರೆಂಡ್ಸ್ ಇದರ ಪ್ರಮುಖ ಆಟಗಾರರಾಗಿದ್ದ ವಿನ್ನಿ ತನ್ನ 45ರ ಹರೆಯದಲ್ಲೂ ಬ್ಯಾಟಿನಲ್ಲಿ ಮಿಂಚು ಹರಿಸುತ್ತಿದ್ದರು. ಮೈದಾನದಲ್ಲಿ ಅತ್ಯಂತ ಶ್ರೇಷ್ಠ ಆಟಗಾರರಾಗಿದ್ದ ಇವರು ಕಳೆದ ಹಲವಾರು ವರ್ಷಗಳಿಂದ ಪಡುಬಿದ್ರೆಯಲ್ಲಿ ಕ್ರೀಡಾ ಮಳಿಗೆಯನ್ನು ಆರಂಭಿಸಿದ್ದರು. ರಾಜ್ಯದ ಮೂಲೆ ಮೂಲೆಗಳಲ್ಲಿ ಆಡಿದ ಅನುಭವವಿರುವ ಇವರು, ಯಾವುದೇ ರೀತಿಯ ಕ್ರಿಕೆಟಿಗೂ ಹೊಂದಿಕೊಳ್ಳುವಂತಹ ಆಟಗಾರ. ಪಾದರಸದಂತೆ ಮಿಂಚಿನ ಸಂಚಲನ ಉಂಟುಮಾಡುವ ಇವರ ಸಿಕ್ಸರ್ ಗಳನ್ನು ನೋಡುವುದೇ ಒಂದು ಚೆಂದ, ಹಿರಿಯ ಆಟಗಾರನಾದರೂ ಯುವ ಆಟಗಾರರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ ಇವರ ಜೀವಿತವಾದಿ ಇಂದು ಬೆಳ್ಳಂ ಬೆಳಗ್ಗೆ ಮುಕ್ತಾಯಗೊಂಡಿದೆ.ಪಡುಬಿದ್ರಿ ಸ್ಪೋರ್ಟ್ಸ್ ಹೌಸ್” ಸಂಸ್ಥೆಯ ಮಾಲೀಕರಾಗಿದ್ದ ವಿನ್ಸಿ ಅವರ ನಿಧನವು ಟೆನ್ನಿಸ್ ಬಾಲ್ ರಂಗಕ್ಕೆ ತುಂಬಲಾರದ ನಷ್ಟ ಆಗಿದೆ ಹಲವು ಗಣ್ಯರು , ಕ್ರಿಕೆಟ್ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ .

Leave a Reply

Your email address will not be published. Required fields are marked *