×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸಂವಿಧಾನದಿಂದಾಗಿರುವ ಕ್ರಾಂತಿಯನ್ನು ನೋಡಿ  ಜಿರ್ಣಿಸಿ ಕೊಳ್ಳಲಾಗದ ಜನ ಸಂವಿಧಾನವನ್ನು ಟೀಕೆ ಮಾಡುತ್ತಿದ್ದಾರೆ- ನಿಕೇತ್ ರಾಜ್ ಮೌರ್ಯ

ಕಾಪು ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಮತ್ತು ರಕ್ಷಣಾಪುರ ಜವನೆರ್  ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆನಡೆಯಿತು ಈ ಸಂದರ್ಭದಲ್ಲಿ ವಾಗ್ಮಿ ನಿಕೇತ್ ರಾಜ್ ಮೌರ್ಯ ಮಾತನಾಡಿ 75 ವರ್ಷ ದಿಂದ ಈಚೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಮನುಷ್ಯ ಸಂವಿಧಾನವನ್ನು ಭಾರತ ದೇಶ ನೋಡುತಿದ್ದೆ ಈ ಚಿಕ್ಕ ಕಾ ಲಾವದಿಯಲ್ಲಿ ಈ ಸಂವಿಧಾನ ಮಾಡಿರುವ ಕ್ರಾಂತಿಯನ್ನು ನೋಡಿ ಜೀರ್ಣಸಿ ಕೊಳ್ಳಲಾಗದ ಜನ ಸಂವಿಧಾನ ವನ್ನು ಟೀಕೆ ಮಾಡುತಿದ್ದಾರೆ ದೇಶ ಭಕ್ತಿಯ ಮುಖವಾಡವನ್ನು ಹಾಕಿಕೊಂಡು ಈ ದೇಶದ ಜನರ ದಿಕ್ಕು ತಪ್ಪಿಸುತ್ತಾರೆ ಯಾವ ಸಂವಿಧಾನದಿಂದ ಅಧಿಕಾರ ಪಡೆದು ಪಾರ್ಲಿಮೆಂಟ್ ಗೆ ಹೋದರು ಅವರೇ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಭಾಷಣ ಮಾಡುತ್ತಾರೆ ಹೇಳಿದರು.ಜಯಪ್ರಕಾಶ್ ಹೆಗ್ಡೆ ಮಾತನಾಡಿ ಸಮ ಸಮಾಜ ವನ್ನು ಕಟ್ಟ ಬೇಕೆಂದು ಸಂವಿದಾನವನ್ನು ಮಾಡಿರುವಂತದ್ದು ಯಾವುದೇ ಕಾನೂನನ್ನು ಮಾಡಿದರೂ ಸಂವಿದಾನದ ವ್ಯಾಪ್ತಿ ಯಲ್ಲಿ ಮಾಡ ಬೇಕು ಎಂದು ತಿಳಿಸಿದರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವರಾದ  ವಿನಯ್ ಕುಮಾರ್ ಸೊರಕೆ ಮಾತನಾಡಿ ಸಂವಿದಾನವನ್ನು ಉಳಿಸುವ ಸಂವಿದಾನದ ಹಕ್ಕುಗಳ ಮುಖಾಂತರ ಸಮಾಜದಲ್ಲಿ ನಮ್ಮನ್ನು ನಾವು ಪ್ರತಿಪಾದಿಸುವಂತ ಅವಕಾಶಗಳು ಆಗಲಿ ಎಂದರು ವೇದಿಕೆಯಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ರಕ್ಷಣಾಪುರ ಜವನೆರ್ ಅಧ್ಯಕ್ಷರಾದ ನವೀನ್ ಎನ್ ಶೆಟ್ಟಿ, ಧರ್ಮಗುರುಗಳಾದ ವಿಲಿಯಂ ಮಾರ್ಟಿಸ್‌, ಶ್ರೀನಿವಾಸ ತಂತ್ರಿ ಮತ್ತು ಇರ್ಶಾದ್‌ ಸಅದಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸುಂದರ ಮಾಸ್ತರ್, ಆನಂದ ಬ್ರಹ್ಮಾವರ, ಪ್ರಮುಖರಾದ ಕಿಶನ್ ಹೆಗ್ಢೆ ಕೊಳ್ಕೆಬೈಲು, ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲು, ಶಾಂತಲತಾ ಶೆಟ್ಟಿ, ಶೇಖರ್ ಹೆಜಮಾಡಿ, ಗೀತಾ ವಾಗ್ಲೆ, ವೆರೋನಿಕಾ ಕರ್ನೆಲಿಯೋ, ಶರ್ಪುದ್ದೀನ್ ಶೇಖ್, ಅಮೀರ್ ಕಾಪು ವಿಶ್ವಾಸ್ ಅಮೀನ್,ರಮೀಜ್ ಹುಸೇನ್   ಶಿವಾಜಿ ಸುವರ್ಣ, ಹರೀಶ್ ಕಿಣಿ, ರಮೇಶ್ ಕಾಂಚನ್, ಕಾಪು ದಿವಾಕರ ಶೆಟ್ಟಿ, ದಿನಕರ ಹೇರೂರು ಪ್ರಭಾಕರ ಆಚಾರ್ಯ ಸತೀಶ್ ದೇಜಡಿ ಮೊದಲಾದವರು ಉಪಸ್ಥಿತರಿದ್ದರು. ಸಭೆಗೂ ಕಾಪು ಜನಾರ್ಧನ ದೇಗುಲ ಆವರಣದಿಂದ ಕಾಪು ಪೇಟೆಯವರೆಗೆ ಸಾವಿರಾರು ಜನರಿಂದ ಜಾಥ ನಡೆಯಿತು. ಇದೇ ಸಂದರ್ಭ ಮೂರು ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸಂವಿಧಾನ ದಿನದ ಪ್ರಯುಕ್ತ ಸೀರೆ ಕೊಡುಗೆಯಾಗಿ ನೀಡಲಾಯಿತು

Leave a Reply

Your email address will not be published. Required fields are marked *