ಏರ್ಮಾಲ್ ಗರಡಿಯ ಸಮೀಪ ಪಡುಬಿದ್ರಿ ಯಿಂದ ಏರ್ಮಾಲ್ ಕಡೆಗೆ ಅಬ್ದುಲ್ ಅಜೀಜ್ ಇವರ ಮೋಟಾರ್ ಸೈಕಲ್ನಲ್ಲಿ ಅವರ ಮಗ ಶೇಖ್ ಅಬ್ದುಲ್ ಸೈಫಾನ್ (14) ಈತನನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಮಂಗಳೂರು-ಉಡುಪಿ ರಾ.ಹೆ 66 ರಸ್ತೆಯಲ್ಲಿ ಪಡುಬಿದ್ರೆ ಕಡೆಯಿಂದ ಉಚ್ಚಿಲ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಮದ್ಯಾಹ್ನ 12:30 ಗಂಟೆಗೆ ಕಾಪು ತಾಲೂಕು ತೆಂಕ ಗ್ರಾಮದ ಎರ್ಮಾಳು ಗರಡಿಯ ಬಳಿ ನಾಯಿಯೊಂದು ರಸ್ತೆಗೆ ಅಡ್ಡಬಂದ ಪರಿಣಾಮ ಮೋಟಾರ್ ಸೈಕಲ್ ಸವಾರರ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿ ಇರುವ ಕಪ್ಪು ಕಂಬಕ್ಕೆ ಡಿಕ್ಕಿ ಹೊಡೆದು ಸವಾರ ಹಾಗೂ ಸಹಸವಾರರು ದ್ವಿಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಬೈಕ್ಗೆ ಬೆಂಕಿ ಹತ್ತಿ ಬಾಗಶಃ ಸುಟ್ಟು ಹೋಗಿದೆ. ಸವಾರ ಅಬ್ದುಲ್ ಅಜೀಜ್ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಸಹಸವಾರ ಶೇಖ್ ಅಬ್ದುಲ್ ಸೈಫಾನ್ ಈತನಿಗೆ ತಲೆಗೆ ಗುದ್ದಿದ ಗಾಯ ಹಾಗೂ ಎದೆಗೆ ತರಚಿದ ಗಾಯಗೊಂಡು ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕತ್ಸೆಯಲ್ಲಿ ಇರುತ್ತಾ ರಾತ್ರಿ 12:30 ಗಂಟೆಗೆ ಚಿಕತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ. ಎಂಬುದಾಗಿ ಅಕ್ರಮ್ (47) ಕಾಪು ತಾಲೂಕು, ಉಡುಪಿ ಇವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2025 ಕಲಂ: 281, 125(a) 106(1) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.

