ಕಡಲ್ ಫಿಶ್ ಕ್ರಿಕೆಟರ್ಸ್ ಪಡುಬಿದ್ರಿ ವತಿಯಿಂದ ಉಭಯ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ‘ಕಡಲ್ ಫಿಶ್ ಟ್ರೋಫಿ-2024’ ರಾಷ್ಟ್ರೀಯ ಮಟ್ಟದ ಹೊನಲು-ಬೆಳಕಿನ ಕ್ರಿಕೆಟ್ ಪಂದ್ಯಕೂಟವು ನವೆಂಬರ್ 16, 17 ಮತ್ತು 18 ರಂದು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಘಟಕ ವಿಶ್ವಾಸ್ ವಿ. ಅಮೀನ್ ಹೇಳಿದರು. ಕಾಪು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾತನಾಡಿದರು. ಈ ಪಂದ್ಯಕೂಟದಲ್ಲಿ ಪ್ರಥಮ ಬಾರಿಗೆ ಶ್ರೀಲಂಕಾ ಮತ್ತು ಇಂಡಿಯಾದ ಟೆನ್ನಿಸ್ ಬಾಲ್ ತಂಡಗಳು ಹಾಗೂ ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿ ರಾಜ್ಯದ ಬೆಂಗಳೂರು, ಉಡುಪಿ, ಮಂಗಳೂರಿನ ಪ್ರಸಿದ್ದ 15 ತಂಡಗಳು ಭಾಗವಹಿಸಲಿವೆ ಎಂದರು ಪಂದ್ಯಕೂಟದ ವಿಜೇತ ತಂಡಕ್ಕೆ 5 ಲಕ್ಷ ರೂ. ದ್ವಿತೀಯ ಸ್ಥಾನ ತಂಡಕ್ಕೆ 3 ಲಕ್ಷ ರೂ. ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು. ಅಲ್ಲದೆ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಹಾಗೂ ಉತ್ತಮ ದಾಂಡಿಗ ಹಾಗೂ ಉತ್ತಮ ಎಸೆತಗಾರ ಪ್ರಶಸ್ತಿ ನೀಡಲಾಗುವುದು. ಲೀಗ್ ಮಾದರಿಯಲ್ಲಿ ಪಂದ್ಯಕೂಟವು ನಡೆಯಲಿದ್ದು, ನವೆಂಬರ್ 18 ರಂದು ಸಂಜೆ ಹೊನಲು ಬೆಳಕಿನಲ್ಲಿ ಫೈನಲ್ ಹಣಾಹಣಿ ನಡೆಯಲಿದೆ ಎಂದು ತಿಳಿಸಿದರು. ಎಮ್.ಆರ್.ಜಿ. ಗ್ರೂಪ್‌ನ ಆಡಳಿತ ನಿರ್ದೇಶಕ ಡಾ. ಕೆ. ಪ್ರಕಾಶ್ ಶೆಟ್ಟಿ ಪಂದ್ಯಕೂಟವನ್ನು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಗೌರವ ಅಧ್ಯಕ್ಷ ನವೀನಚಂದ್ರ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಜಿತೇಂದ್ರ ಜೆ. ಶೆಟ್ಟಿ ಪಡುಬಿದ್ರಿ, ಕಿಶೋರ್ ಆಳ್ವ, ವೈ. ಸುಧೀರ್ ಕುಮಾರ್ ಮತ್ತಿತರರು ಉಪಸ್ಥಿತರಿರುವರು. ಸಮಾರೋಪದಲ್ಲಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಾಲಚಂದ್ರ ಶೆಟ್ಟಿ ಪುಣೆ, ಶರತ್ ಶೆಟ್ಟಿ ಪಡುಬಿದ್ರಿ, ಗೌತಮ್ ಶೆಟ್ಟಿ, ರಮೀಜ್ ಹುಸೇನ್, ಕರುಣಾಕರ್ ಪೂಜಾರಿ, ರಚನ್ ಸಾಲ್ಯಾನ್, ಪಾಂಡುರಂಗ ಕೋಟ್ಯಾನ್, ಕಡಲ್ ಫಿಶ್ ಕ್ರಿಕೆಟರ್ಸ್‌ನ ಅಧ್ಯಕ್ಷ ಪ್ರಶಾಂತ್ ಸಾಲ್ಯಾನ್, ಅಶ್ವಿನ್ ಕೋಟ್ಯಾನ್ ಮತಿತ್ತರರು ಭಾಗವಹಿಸಲಿದ್ದಾರೆ ಎಂದರು. ಪ್ರಮುಖರಾದ ನವೀನಚಂದ್ರ ಜೆ. ಶೆಟ್ಟಿ, ಚೇತನ್ ಕುಮಾರ್, ವಿಶ್ವಾಸ್ ವಿ.ಅಮೀನ್, ಸಂತೋಷ್ ಪಡುಬಿದ್ರಿ, ರಚನ್ ಸಾಲ್ಯಾನ್, ಪಾಂಡುರಂಗ ಕೋಟ್ಯಾನ್ ಉಪಸ್ಥಿತರಿದ್ದರು.

