ಬೆಳ್ಳಣ್ ಬಸ್ ನಿಲ್ದಾಣದ ಹತ್ತಿರದ ಸೂರಜ್ ಹಿಲ್ಸ್ ಕಟ್ಟಡದಲ್ಲಿ ಬೆಳ್ಳಣ್ ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಶ್ರೀಧಾಮ ಮಾಣಿಲದ ಪರಮಹಂಸ ಸ್ವಾಮೀಜಿ ಲೋಕಾರ್ಪಣೆಗೈದರು ಬೆಳ್ಳಣ್ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಡಳಿತ ಮೊಕ್ತಸರ ಬಿ.ಎಫೇಶ್ ಭಟ್ ಭದ್ರತಾ ಕೊಠಡಿ ಉದ್ಘಾಟಿಸಿದರೆ, ಬೆಳ್ಳಣ್ ಸಂತ ಜೋಸೆಫರ ದೇವಾಲಯದ ಪ್ರಧಾನ ಧರ್ಮಗುರು ರೆ| ಫಾ। ಫೆಡ್ರಿಕ್ ಮಸ್ಕರೇನಸ್ ಗಣಕ ಯಂತ್ರ ವ್ಯವಸ್ಥೆಯನ್ನು ಉದ್ಘಾಟಿಸಿದರು. ಸೊಸೈಟಿಯ ಅಧ್ಯಕ್ಷ ಕುಶ ಆರ್. 5 ಮೂಲ್ಯ ಅಧ್ಯಕ್ಷತೆ ವಹಿಸಿದ್ದು, ಲೇಖಕ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂರಜ್ ಹಿಲ್ಸ್ ಮಾಲಕ ಶೋಧನ್ ಕುಮಾರ್ ಶೆಟ್ಟಿ ಬೆಳ್ಳಣ್ ಪಂ.ಅಧ್ಯಕ್ಷೆ ರಾಮೇಶ್ವರೀ ಶೆಟ್ಟಿ ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷಜಯರಾಮ ಕುಲಾಲ್, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಭೋಜ ಕುಲಾಲ್, ಕಾಪು ವಲಯ ಕುಲಾಲ ಸಂಘದ ಅಧ್ಯಕ್ಷ ಹರೀಶ್ ಕುಲಾಲ್, ಬೆಳ್ಳಣ್ ವಲಯ ಬಂಟರ ಸಂಘದ ಅಧ್ಯಕ್ಷನಂದಳಿಕೆಸುಹಾಸ್ ಹೆಗ್ಡೆ ಬೆಳ್ಳಣ್ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ವಿ.ಕೆ. ನಂದಳಿಕೆ, ಮಂಜರಪಲ್ಕೆ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಆಚಾರ್ಯ, ಬೆಳ್ಳಣ್ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಸುನಿಲ್ ಬೋಳ, ಬೆಳ್ಳಣ್ ವಿಠೋಭ ಭಜನ ಮಂದಿರದ ಅಧ್ಯಕ್ಷ ಡಾ| ಪ್ರಭಾಕರ ನಾಯಕ್, ಮುಂಡೂರು ಸಪಳಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ದೇವಪ್ಪ ಸಪಳಿಗ ಸೊಸೈಟಿ ಉಪಾಧ್ಯಕ್ಷ ಜಗನ್ನಾಥ ಮೂಲ್ಯ, ಕಾ.ನಿ. ಅಧಿಕಾರಿ ಬ್ರಿಜೇಶ್ ಕುಲಾಲ್, ನಿರ್ದೇಶಕರು ಇದ್ದರು. ದಾನಿಗಳನ್ನು ಸಮ್ಮಾನಿಸಲಾಯಿತು. ಸ್ವ-ಸಹಾಯ ಸಂಘಗಳಿಗೆ ಬ್ಯಾಗ್ ವಿತರಿಸಲಾಯಿತು. ಸಂಗೀತ ಕುಲಾಲ್ ಸ್ವಾಗತಿಸಿ, ಗೋಪಾಲ ಮೂಲ್ಯ ವಂದಿಸಿದರು. ಸತೀಶ್ ಹೊಸ್ಟಾರ್, ದೇವಿಪ್ರಸಾದ್ ಬೆಳ್ಳಿಪಾಡಿ ನಿರೂಪಿಸಿದರು.


