×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬ್ರಹ್ಮಾವರ : ಬಂಟರ ಯಾನೆ ನಾಡವರ ಸಂಘ (ರಿ.) ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ

ಬ್ರಹ್ಮಾವರ, ನ. 9: ಸಂಘದಲ್ಲಿ ಉದ್ದೇಶಗಳು ಹಾಗೂ ಸಹಕಾರ ಮನೋಭಾವಗಳು ಸಂಘ ಸ್ಥಾಪನೆಯ ಪ್ರಧಾನ ಅಂಶಗಳಾಗಿವೆ. ಇದರ ಕಾರ್ಯ ನಿರ್ವಹಣೆಯಲ್ಲಿ ನಿರ್ದಿಷ್ಟ ಪಾತ್ರಗಳ ಹಾಗೂ ಸ್ವಾರ್ಥ ಸೇವಾ ಚಟುವಟಿಕೆಯಿಂದ ಸಂಘಟನೆ ಸಾರ್ಥಕವಾಗುತ್ತದೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.ಬ್ರಹ್ಮಾವರಬಂಟರ ಭವನದಲ್ಲಿ ಬಂಟರ ಯಾನೆ ನಾಡವರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು, ಸುದರ್ಶನ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಬಂಟರ ಭವನದ ಸಂಚಾಲಕ ಬಿ. ಭುಜಂಗ ಶೆಟ್ಟಿ ಸಂಘದ ಮಾಜಿ ಅಧ್ಯಕ್ಷರಾದ ಎಚ್ ವಿಠಲ ಶೆಟ್ಟಿ ಶೇಡಿಕೋಡ್ಲು ಬಾಲಕೃಷ್ಣ ಹೆಗ್ಡೆ ಬಿ. ರಾಜಾರಾಮ ಶೆಟ್ಟಿ ನಿಕಟಪೂರ್ವ ಅಧ್ಯಕ್ಷ ಮೈರ್ಮಾಡಿ ಸುಧಾಕರ ಶೆಟ್ಟಿ ಪ್ರಮುಖರಾದ ಬೈಕಾಡಿ ಸುಪ್ರಸಾದ ಶೆಟ್ಟಿ ಉದಯ ಕುಮಾರ್ ಶೆಟ್ಟಿ ಅಶೋಕ್ ಕುಮಾರ್ ಶೆಟ್ಟಿ ರವೀಂದ್ರ ಶೆಟ್ಟಿ ಕುಮ್ರಗೋಡು, ನಡೂರು ನಿತ್ಯಾನಂದ ಶೆಟ್ಟಿ ಕಿಶೋರಿ ಎಸ್. ಶೆಟ್ಟಿ ವಿಜಯ ಶೆಟ್ಟಿ ಆವರ್ಸೆ, ದಿನಕರ ಶೆಟ್ಟಿ ಬೈಕಾಡಿ, ಉದಯ ಕುಮಾರ್ ಶೆಟ್ಟಿ ಶಕೀಲಾ ಡಿ. ಹೆಗ್ಡೆ ಜಯಶ್ರೀ ಆರ್. ಶೆಟ್ಟಿ ಸುಂದರ ಶೆಟ್ಟಿ ಜಯಶ್ರೀ ವಿ. ಶೆಟ್ಟಿ ಕೆಂಜೂರು ಮುಂತಾದವರು ಉಪಸ್ಥಿತರಿದ್ದರು.ಸಾಧಕರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ದತ್ತು ಸ್ವೀಕರಿಸಲಾಯಿತು. ಉಪಾಧ್ಯಕ್ಷ ಆರೂರು ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಆನಂದ ಶೆಟ್ಟಿ ನಿರೂಪಿಸಿದರು

Leave a Reply

Your email address will not be published. Required fields are marked *