ಆನೆಗುಂದಿ ಗುರು ಸೇವಾ ಪರಿಷತ್ ಉಡುಪಿ ಮಹಾಮಂಡಲ ಇದರ ವತಿಯಿಂದ ಗಿಚ್ಚ ಗಿಲಿ ಗಿಲಿ ಹಾಗೂ ಮಜಾ ಭಾರತ ಖ್ಯಾತಿಯ ವಿಶ್ವಕರ್ಮ ಸಮಾಜದ ವಿನೋದ್ ಗೊಬ್ಬರಗಾಲ್‌ರವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು. ಆನೆಗುಂದಿ ಪ್ರತಿಷ್ಠಾನದ ಪರಿಷತ್ತಿನ ಅಧ್ಯಕ್ಷ ಸುಧಾಕರ ಆಚಾರ್ಯ ಕುಕ್ಕಿ ಕಟ್ಟೆ, ಉಪಾಧ್ಯಕ್ಷ ನಾಗರಾಜ ಆಚಾರ್ಯ ಕಾಡಬೆಟ್ಟು, ಮಠದ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಕಾಡಬೆಟ್ಟು, ಆನೆಗುಂದಿ ಮಠದ ಮಾತೃ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಳಿ, ವಿಶ್ವಕರ್ಮ ಸಮಾಜದ ಮುಖಂಡ ಶ್ರೀಕಾಂತ ಆಚಾರ್ಯ ಕಾಪು, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಗಾಯತ್ರಿ ಕಲ್ಯಾಣ ಮಂಟಪ ಅಧ್ಯಕ್ಷ ವೆಂಕಟೇಶ್ ಆಚಾರ್ಯ ಕುತ್ಪಾಡಿ, ಯುವಕ ಸೇವಾ ದಳದ ಅಧ್ಯಕ್ಷ ನಾಗರಾಜ ಆಚಾರ್ಯ ಪಿ ವಿ, ಸೇವಾದಳದ ಗೌರವಾಧ್ಯಕ್ಷ ಕಿಶೋರ್ ಆಚಾರ್ಯ ಗುಂಡಿಬೈಲ್, ಯುವ ಸಂಗಮ ಶಿರ್ವ ಮಂಚಕಲ್ ಗೌರವಾಧ್ಯಕ್ಷ ಸುರೇಶ ಆಚಾರ್ಯ ಮಂಚಕಲ್, ಆನೆಗುಂದಿ ಗುರು ಸೇವಾ ಪರಿಷತ್ ತೆಂಕನೀಡಿಯೂರು ವಲಯದ ಅಧ್ಯಕ್ಷರ ದಯಾನಂದ ಆಚಾರ್ಯ ಕೆಲಾರ್ಕಳಬೆಟ್ಟು, ಮಠದ ವಿಶ್ವಸ್ತರಾದ ಜಯಕರ ಆಚಾರ್ಯ ಕರಂಬಳ್ಳಿ, ರತ್ನಾಕರ ಆಚಾರ್ಯ ಉದ್ಯಾವರ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಕರಂಬಳ್ಳಿ ಹಾಗೂ ಕೋಶಾಧಿಕಾರಿ ಪ್ರಸಾದ ಆಚಾರ್ಯ ಕಾಡಬೆಟ್ಟು ಮತ್ತು ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಪರಿಷತ್ತಿನ ಕಾರ್ಯದರ್ಶಿ ಹರೀಶ್ ಆಚಾರ್ಯ ಉಪ್ಪೂರು ಸ್ವಾಗತಿಸಿ, ವಂದಿಸಿದರು.

