×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನುಡಿದಂತೆ ನಡೆದ ರಾಜ್ಯದ ಎಲ್ಲಾ ವರ್ಗದ,ಸಮುಧಾಯದ ಸಮಗ್ರ ಅಭಿವೃದ್ದಿ ,ಜನಪರ ,ಸಮತೋಲನದ ದಾಖಲೆಯ ಬಜೆಟ್ ಗೆ ಸ್ವಾಗತಾರ್ಹ – ಶರ್ಫುದ್ದೀನ್ ಶೇಖ್

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್‌ ಮೊತ್ತ ನಾಲ್ಕು ಲಕ್ಷ ಕೋಟಿ ರೂಪಾಯಿಗಳಾಗಿದೆ.ಸುಮಾರು 51000 ಕೋಟಿ ರೂಪಾಯಿ ಪಂಚ ಗ್ಯಾರಂಟಿ ಯೋಜನೆಗೆ ಮೀಸಲಿಟ್ಟಿದ್ದಾರೆ, ಮುಸ್ಲಿಮರು ಸೇರಿ ಈ ರಾಜ್ಯದ ಎಲ್ಲಾ ಅಲ್ಪ ಸಂಖ್ಯಾತರಿಗೆ ಮೀಸಲಿಟ್ಟ ಹಣ ಕೇವಲ 1,300 ಕೋಟಿ ರೂಪಾಯಿಗಳಾಗಿವೆ.ಈ ದೇಶದಲ್ಲಿರುವ ಅಲ್ಪಸಂಖ್ಯಾತರು ಸಹ ಭಾರತದ ಪ್ರಜೆಗಳೆ,ರಾಜ್ಯದಲ್ಲಿ ಅಲ್ಪ ಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಮಾತ್ರವಲ್ಲ. 2% ಕ್ರಿಶ್ಚಿಯನ್ನರು, 1% ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಇದ್ದಾರೆ. ಈ ವಿಚಾರ ಜೆಪಿಗಾಗಲಿ, ಕನ್ನಡ ಮಾಧ್ಯಮಗಳಿಗಾಗಲಿ ತಿಳಿದಿಲ್ಲ ಎಂಬುವುದೇನಿಲ್ಲ.ಆದರೂ ಕೆಟ್ಟ ಮನಸ್ಥಿತಿಯಿಂದ ಬಜೆಟ್ ಬಗ್ಗೆ ದೂರುತ್ತಿದ್ದಾರೆ. ಅದೇನಿದ್ದರೂ ರಾಜ್ಯದ ಇತಿಹಾಸದಲ್ಲಿ ಇಂತಹ ಜನಪರವಾದ ಬಜೆಟ್ ರಾಜ್ಯದ ಜನತೆ ಎಂದಿಗೂ ನೋಡಿರಲಿಲ್ಲ. ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ತಿಳಿಸಿದ್ದಾರೆ

Leave a Reply

Your email address will not be published. Required fields are marked *