×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪದವೀಧರರ, ಶಿಕ್ಷಕರ ಹಾಗೂ ಸರಕಾರಿ ನೌಕರರ ಬೇಡಿಕೆಗಳ ಸಂಪೂರ್ಣ ಅರಿವಿದೆ – ಪದವೀಧರರ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇನೆ – ರಘುಪತಿ ಭಟ್

ಜನತೆಯ ಆಶೀರ್ವಾದದಿಂದ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 3 ಬಾರಿ ಶಾಸಕನಾದ ಉಡುಪಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿರುತ್ತೇನೆ. ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ನನ್ನನ್ನು ಹರಸಿ ಆಶೀರ್ವದಿಸಿದರೆ ವಿಧಾನ ಸಭೆ ಸದಸ್ಯನಾಗಿ ಕೆಲಸ ನಿರ್ವಹಿಸಿದ ಕಾರ್ಯಾನುಭವದೊಂದಿಗೆ ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡಿ ಪದವೀಧರರ, ಶಿಕ್ಷಕರ ಹಾಗೂ ಸರಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಅವರ ಧ್ವನಿಯಾಗುತ್ತೇನೆ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಶ್ರೀ‌ ಕೆ. ರಘುಪತಿ ಭಟ್ ಅವರು‌ ಹೇಳಿದರು. ಶಿವಮೊಗ್ಗ ಹಾಗೂ ಶಿಕಾರಿಪುರದ ವಿವಿಧ ಭಾಗಗಳಲ್ಲಿ ಇಂದು ದಿನಾಂಕ 29-05-2024 ರಂದು ಮತದಾರರ ಸಭೆ ನಡೆಸಿ ಭರವಸೆ ನೀಡಿದರು. ಪದವೀಧರರಿಗೆ ಉದ್ಯೋಗ – ಪದವೀಧರರಿಂದ ಉದ್ಯಮ – ಸಹಾಯ – ಸಹಕಾರ – ಸಂಪರ್ಕ ಇದು ನನ್ನ ಆಶಯವಾಗಿದೆ. ಎಲ್ಲಾ ಸರ್ಕಾರಿ ನೌಕರರ ಬೇಡಿಕೆಯಾದ ಎನ್.ಪಿ.ಎಸ್. (ನೂತನ ಪಿಂಚಣಿ ಯೋಜನೆ) ರದ್ದು ಪಡಿಸಿ ಒ.ಪಿ.ಎಸ್. (ಹಳೆ ಪಿಂಚಣಿ ಯೋಜನೆ) ಜಾರಿಗೆ ತರಲು ವಿಧಾನ ಪರಿಷತ್ ನ ಒಳಗೆ ಮತ್ತು ಹೊರಗೆ ನಿಮ್ಮ ಧ್ವನಿಯಾಗುತ್ತೇನೆ. ಹಾಗೂ ಶಿಕ್ಷಕರ ಸಮಸ್ಯೆಗಳು ಮತ್ತು ಬೇಡಿಕೆಗಳ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು ಇದನ್ನು ಈಡೇರಿಸಲು ನಿಮ್ಮ ಧ್ವನಿಯಾಗುತ್ತೇನೆ ಎಂದ ಅವರು ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಮೊದಲ ಪ್ರಾಶಸ್ತ್ಯದ ಮತ ನೀಡಿ ಹರಿಸುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *