×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕರ್ನಾಟಕ ರಾಜ್ಯ ಜೂನಿಯರ್, 23 ವರ್ಷದೊಳಗಿನ ಕ್ರೀಡಾಕೂಟ: ದ.ಕ.ಜಿಲ್ಲೆಗೆ ಚಾಂಪಿಯನ್ ಪಟ್ಟ

ಉಡುಪಿ, ಆ.25. ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ದಲ್ಲಿ ಮೂರು ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಹಾಗೂ 23 ವರ್ಷದೊಳಗಿನವರ ಅಥ್ಲೆಟಿಕ್ ಮೀಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳೇ ಉತ್ತಮ ಸಾಧನೆ ತೋರಿದೆ, ನಾಲ್ಕು ವಿಭಾಗಗಳಲ್ಲಿ ತಂಡ ಪ್ರಶಸ್ತಿಯೂ ಸೇರಿದಂತೆ ಕೂಟದ ಸಮಗ್ರ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡರು ಸಮಗ್ರ ಪ್ರಶಸ್ತಿಯನ್ನು ರನ್ನರ್ ಅಪ್ ಸ್ಥಾನ ಬೆಂಗಳೂರು ತಂಡದ ಪಾಲಾಯಿತು. ದಕ್ಷಿಣ ಕನ್ನಡದ ಅಥ್ಲೆಟ್‌ಗಳು 14 ವರ್ಷದೊಳಗಿನ ವಿಭಾಗದಲ್ಲಿ 43 ಅಂಕಗಳೊಂದಿಗೆ (ರನ್ನ‌ರ್ ಅಪ್ ಶಿವಮೊಗ್ಗ-24), 16ವರ್ಷದೊಳಗಿನ ವಿಭಾಗ ದಲ್ಲಿ 77 ಅಂಕ (ರನ್ನರ್ ಅಪ್ ಬೆಂಗಳೂರು-66), 18ವರ್ಷದೊಳಗಿನ ವಿಭಾಗದಲ್ಲಿ 87 ಅಂಕಗಳೊಂದಿಗೆ (ರನ್ನ‌ರ್ ಅಪ್ ಉಡುಪಿ-80), 20 ವರ್ಷದೊಳಗಿನವರ ವಿಭಾಗದಲ್ಲಿ 148 ಅಂಕಗಳೊಂದಿಗೆ (ರನ್ನರ್ ಅಪ್ ಬೆಂಗಳೂರು 120) ಚಾಂಪಿಯನ್ ಪಟ್ಟ ಪಡೆದರು. 23ವರ್ಷದೊಳಗಿನವರ ಸ್ಟೀಪಲ್‌ಚೇಸ್‌ನಲ್ಲಿ ಉತ್ತರ ಕನ್ನಡದ ಗಣಪತಿ ಅವರು 9:25.93ಸೆ.ಗಳ ಸಾಧನೆ ಯೊಂದಿಗೆ ಸಂಜೀವ ಕುಮಾರ್ ಹೆಸರಿನಲ್ಲಿದ್ದ ಹಳೆ ದಾಖಲೆ 9:52.41ಸೆ.ಯನ್ನು ತನ್ನ ಹೆಸರಿಗೆ ಬರೆದರು. 18ವರ್ಷದೊಳಗಿನ ಬಾಲಕರ 200ಮೀ. ಓಟದಲ್ಲಿ ಮೈಸೂರಿನ ಚಿರಂತ್ 200ಮೀ.ಓಟದಲ್ಲಿ 21.38ಸೆ.ಗಳ ದಾಖಲೆ ಬರೆದಿದ್ದು, 2023ರಲ್ಲಿ ಮುತ್ತಣ್ಣ ವೈ.ಕೆ. ಹೆಸರಿನಲ್ಲಿದ್ದ 21.51ಸೆ. ದಾಖಲೆ ಅಳಿಸಿದರು.18ವರ್ಷದೊಳಗಿನ ಬಾಲಕರ 5000ಮೀ. ನಡಿಗೆಯಲ್ಲಿ ಬೆಳಗಾವಿಯ ಸಿದ್ರಾಯಪ್ಪ ಪುಂಗಿ ಅವರು 26:03.98ಸೆ.ಗಳ ಹೊಸ ದಾಖಲೆ ಬರೆದರು. ಅವರು ಕಳೆದ ವರ್ಷ ವಿನಾಯಕ ಜಿ.ಕೆ. ಸ್ಥಾಪಿಸದ ದಾಖಲೆಯನ್ನು ಉತ್ತಮ ಪಡಿಸಿದರು.23ವರ್ಷದೊಳಗಿನ ಮಹಿಳೆಯರ 200ಮೀ. ಸ್ಪಿಂಟ್‌ನಲ್ಲಿ ಬೆಂಗಳೂರಿನ ಶ್ರೇಯಾ ರಾಜೇಶ್ ಅವರು 24.75ಸೆ.ಗಳ ಹೊಸ ದಾಖಲೆಯನ್ನು ತನ್ನ ಹೆಸರಿಗೆ ಬರೆದರು. ಅವರು ಕಳೆದ ವರ್ಷ ಜ್ಯೋತಿಕಾ ಬರೆದ 24.90ಸೆ. ದಾಖಲೆಯನ್ನು ಮುರಿದರು.

Leave a Reply

Your email address will not be published. Required fields are marked *