×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮೂಡುಶೆಡ್ಡೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಮಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂಡುಶೆಡ್ಡೆ ಜಿ.ಪಂ. ವ್ಯಾಪ್ತಿಯ ಆಯ್ದ ಗ್ರಾಮ ಪಂಚಾಯತ್’ಗಳ ಬೂತ್ ಅಧ್ಯಕ್ಷ ಹಾಗೂ ಸಕ್ರೀಯ ಕಾರ್ಯಕರ್ತರ ಸಮಾವೇಶ ಮೂಡುಶೆಡ್ಡೆಯಲ್ಲಿ ಶುಕ್ರವಾರ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಆರೋಗ್ಯ, ಶಿಕ್ಷಣ, ಆಸರೆ ಧ್ಯೇಯವಾಗಿಟ್ಟು ಸಾಮಾಜಿಕ ಕೆಲಸ ನಿರ್ವಹಿಸುತ್ತಾ ಇದ್ದೇನೆ. ಇದರ ನಡುವೆ ರಾಜಕೀಯದಲ್ಲಿ ತೊಡಗಿಕೊಳ್ಳಲು ಕಾಂಗ್ರೆಸ್ ಅವಕಾಶ ನೀಡಿದೆ. ಮುಂದೆ ಚುನಾವಣೆಯಲ್ಲಿ ಜಯ ಗಳಿಸಿ, ಜಿಲ್ಲೆಯನ್ನು ಅಭಿವೃದ್ಧಿ ಕಡೆ ಕೊಂಡೊಯ್ಯಬೇಕಾಗಿದೆ ಎಂದರು. ಮಿಥುನ್ ರೈ ಮಾತನಾಡಿ, ಬಯಸದೇ ಸಿಕ್ಕಿದ ಭಾಗ್ಯ ಪದ್ಮರಾಜ್ ಆರ್. ಪೂಜಾರಿ. ಹಿಂದುಳಿದ ವರ್ಗದ ಯುವ ನಾಯಕನಿಗೆ ಕಾಂಗ್ರೆಸ್ ಅವಕಾಶ ನೀಡುವ ಮೂಲಕ ಹಿಂದುಳಿದ ವರ್ಗದ ಧ್ವನಿಯಾಗುವ ಪ್ರಯತ್ನ ಮಾಡಿದೆ. ಇಂದು ಎಲ್ಲೆಡೆಯೂ ಎಲ್ಲಾ ಮನೆಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ಈ ಬಾರಿ ಜಿಲ್ಲೆಯಲ್ಲಿ ಜಯ ಗಳಿಸಲಿದ್ದಾರೆ ಎಂದರು. ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾರ್ಡ್, ಮೂಡುಶೆಡ್ಡೆ ವಲಯಾಧ್ಯಕ್ಷ ದಿನೇಶ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ವಿಕ್ಟರ್ ಡಿಸೋಜಾ, ಶಿವರಾಮ್ ಮಲ್ಲಿ, ಲಾರೆನ್ಸ್ ಸಿಕ್ವೇರಾ, ಜಯಂತ್ ಎಸ್., ಶಿವರಾಮ್ ಪೂಜಾರಿ, ರೋಶನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *