
ಕಾಪು: ಕಳೆದ ಬಾರಿ ಚುನಾವಣೆಯಲ್ಲಿ ಸೋತೆ ಎಂದು ಬೆಂಗಳೂರಿಗೆ ಹೋಗಿ ಕೂತಿಲ್ಲ. ಕ್ಷೇತ್ರದ ಜನರ ನಡುವೆ ಇದ್ದು ಜನಪ್ರತಿನಿಧಿಗಳನ್ನು ಮೀರಿಸುವಂತೆ ಜನರ ಕಷ್ಟ ಕ್ಕೆ ಸ್ಪಂದಿಸಿದ್ದೇನೆ. ಇದು ನನ್ನ ಕಡೆಯ ಚುನಾವಣೆ. ನನ್ನ ಕೈ ಹಿಡಿಯುವಿರಿ ಅನ್ನೋ ನಂಬಿಕೆ ಇದೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದರು.ಇವರು
ಕಾಪು ಪೇಟೆಯಲ್ಲಿ ನಾಮ ಪತ್ರ ಸಲ್ಲಿಕೆಗೂ ಮೊದಲು ಮಾತನಾಡಿ ಶುದ್ಧ ಸಚ್ಛಾರಿತ್ರ್ಯ ರಾಜಕಾರಣಕ್ಕೆ ಈ ಬಾರಿ ಯಾದರೂ ಕಾಪು ಕ್ಷೇತ್ರದ ಜನತೆ ಬೆಲೆ ಕೊಟ್ಟು ನನ್ನನ್ನು ಆರಿಸುತ್ತಾರೆ ಎಂದು ನಂಬಿದ್ದೇನೆ. ನಾಮಪತ್ರ ಸಲ್ಲಿಕೆಗೂ ಮುನ್ನ ಸೊರಕೆ ಕಾಪು ಕ್ಷೇತ್ರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಕಾಪು ಜನಾರ್ಧನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆಯ ಮೂಲಕ ಕಾಪು ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಲು ಹೋದ ಸೊರಕೆ ತನ್ನ ಶಾಸಕತ್ವದ ಅವಧಿಯಲ್ಲಿ ನಿರ್ಮಾಣ ವಾದ ಕಾಪು ತಾಲೂಕು ಸೌಧಕ್ಕೆಚಪ್ಪಲಿ ಬದಿಗಿರಿಸಿ ಸಾಷ್ಟಾಂಗ ನಮಸ್ಕರಿಸಿ ಒಳಗೆ ನಡಿದಿದ್ದು ವಿಶೇಷವಾಗಿತ್ತು. ಬಳಿಕ ಮಾಧ್ಯಮ ದೊಂದಿಗೆ ಮಾತಾನಡಿದ ಸೊರಕೆ ತನ್ನ ಶಾಸಕತ್ವದ ಅವಧಿಯಲ್ಲಿ ನಿರ್ಮಾಣವಾದ ತಾಲೂಕು ಸೌಧದಲ್ಲಿ ನಾಮಪತ್ರ ಸಲ್ಲಿಸುತ್ತಿರುವುದು ಬಹಳಷ್ಟು ಹೆಮ್ಮೆ ಮತ್ತುಖುಷಿಯನ್ನುಂಟು ಮಾಡಿದೆ , ಕಾಪು ಎಲ್ಲರನ್ನೂ ಕಾಪಾಡುವ ಊರು ,ರಕ್ಷಣಾಪುರ ಅಂತಾ ಹೆಸರು ಪಡೆದಿರೋ ಊರಲ್ಲಿ ಶಾಂತಿನೆಲೆಯಾಗಬೇಕು..ಶಾಂತಿ ಇದ್ರೆ ಮಾತ್ರ ಪೂರಕ ಅಭಿವೃದ್ಧಿ ಸಾಧ್ಯ. ಅದಕ್ಕೆ ಪೂರಕ ವ್ಯವಸ್ಥೆ ಗಳು ಕಾಪುವಿನಲ್ಲಿ ಆಗಬೇಕಿದೆ. ಕಾಪು ವನ್ನು ಸರ್ವತೋಮುಖ ಅಭಿವ್ರದ್ದಿ ಮಾಡೋದು ನನ್ನಕನಸು: ಕಾಪು ವಿನಲ್ಲಿ ಅಭಿವೃದ್ಧಿ ಯಾಗಬಲ್ಲ ಎಲ್ಲಾ ಪೂರಕ ವಾತಾವರಣ ವನ್ನು ಸ್ರಷ್ಟಿ ಮಾಡಬೇಕು. ಪ್ರವಾಸೋದ್ಯಮ ಕ್ಕೆ ಬಹಳಷ್ಟು ಅವಕಾಶವಿದೆ. ಕೈಗಾರಿಕಾ ವಲಯ ಸ್ಥಾಪನೆಯಾಗಬೇಕಿದೆ. ಹೆಜಮಾಡಿ ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ತಾಲೂಕು ಸೌಧಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಗಳು ಶೀಘ್ರ ನಿರ್ಮಾಣವಾಗಬೇಕಿದೆ. ಮಲ್ಲಿಗೆ , ಮಟ್ಟುಗುಳ್ಳಕ್ಕೆ ಬೇಕಾದ ಸಾಕಷ್ಟು ಉತ್ತೇಜನ, ಸುಸಜ್ಜಿತಕ್ರೀಡಾಂಗಣ ಹೀಗೆ ಕಾಪು ಹತ್ತುಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಕನಸು ನನ್ನದಾಗಿದೆ ಎಂದರು. ಸುಧೀರ್ ಮರೋಳಿ ಮಾತನಾಡಿ ಸಾರ್ವಜನಿಕ ರಂಗದಲ್ಲಿ ಸ್ಪಟಿಕದಷ್ಟು ಶುದ್ಧರಾಜಕಾರಣ ಮಾಡಿದವರು ಸೊರಕೆಯವರು. ಬದುಕಿನ ಆರಂಭದಿಂದ ಒಂದೇ ಸಿದ್ಧಾಂತದಡಿ ಕೆಲಸ ಮಾಡಿದ ರಾಜಕಾರಣಿ ವಿನಯ ಕುಮಾರ್ ಸೊರಕೆಯನ್ನು ಈಬಾರೀ ಕಾಪುವಿನ ಜನತೆ ಗೆಲ್ಲಿಸಲು ಪಣ ತೊಡಬೇಕು ಎಂದರು. ಈ ಸಂದರ್ಭ ಶಕುಂತಲಾ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ,ಐವನ್ ಡಿಸೋಜ ,ಕಾಪು ದಿವಾಕರ ಶೆಟ್ಟಿ, ಸುಧೀರ್ ಮುರೋಳಿ, ನವೀನಚಂದ್ರ ಶೆಟ್ಟಿ ನವೀನ್ ಚಂದ್ರ ಸುವರ್ಣ,ಎಂ ಎ ಗಫೂರ್.ಹರೀಶ್ ಕಿಣಿ, ಅಶೋಕ್ ಕುಮಾರ್ ಕೊಡವೂರ್,ಪ್ರಸಾದ್ ರಾಜ್ ಕಾಂಚನ್ ಸರ್ಫ್ಯೂದ್ದಿನ್ ಶೇಕ್ ರಮೀಜ್ ಹುಸೇನ್ ಹಸನ್ ಪಡುಬಿದ್ರೆ ಸತೀಶ್ ದೇಜಡಿ ವಿನಯ್ ಬಲ್ಲಾಳ್ ಅಮೀರ್ ಕಾಪು ಫಾರೂಕ್ ಚಂದ್ರ ನಗರ್ ಅಝೀಜ್ ಹೆಜಮಾಡಿ ಪ್ರಭಾ ಶೆಟ್ಟಿ ದೀಪಕ್ ಎರ್ಮಾಳ್ ಅಲ್ಲದೆ ಹಲವಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

