ಪಕ್ಷದ ಚೌಕಟ್ಟಿನ್ನು ಮೀರದೆ ಪರಿಣಾಮಕಾರಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಒಬ್ಬ ಪ್ರಾಮಾಣಿಕ ಸಂಘಟಕ, ನೇರ ನಡೆ-ನುಡಿಯ ನಿಷ್ಠುರವಾದಿ ಕಾಂಗ್ರೆಸ್ಸಿಗ, ಬಡವರ ಶೋಷಿತರ ಪರ ಧ್ವನಿಯೆತ್ತುತ್ತಿದ್ದ ಜನಪರ ನಾಯಕ, ಅನೇಕ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆಸಲಿಸಿದ್ದ ಒಬ್ಬ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ದಿ. ಇಗ್ನೇಷಿಯಸ್ ಡಿಸೋಜರವರ ನಿಧನದಿಂದಾಗಿ ಕಾಂಗ್ರೆಸ್ ಪಕ್ಷವು ಒಬ್ಬ ನೈಜ ನಾಯಕ ನನ್ನು ಕಳೆದುಕೊಂಡಿದೆ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು. ಅವರು ಇಂದು, ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ “ರಾಜೀವ್ ಭವನ” ದಲ್ಲಿ ಆಯೋಜಿಸಲಾಗಿದ್ದ “ಶ್ರದ್ಧಾಂಜಲಿ ಸಭೆ “ಯಲ್ಲಿ ಮಾತನಾಡುತ್ತಾ, ಇಗ್ನೇಷಿಯಸ್ ಡಿಸೋಜರವರು ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತಿದ್ದ ಪ್ರಾಮುಖ್ಯತೆ, ತೋರಿಸುತ್ತಿದ್ದ ಬದ್ಧತೆ ಮತ್ತು ನಿಷ್ಠೆಯನ್ನು ಎಲ್ಲಾ ಕಾರ್ಯಕರ್ತರು ತಮ್ಮ ರಾಜಕೀಯ ಜೀವನದಲ್ಲಿ ಮಾದರಿಯಾಗಿ ಅಳವಡಿಸಿಕೊಂಡು ಕಾರ್ಯನಿರ್ವಹಿಸುವುದೇ ಅವರಿಗೆ ಸಲ್ಲಿಸುವ ಬಹುದೊಡ್ಡ ಶ್ರದ್ಧಾಂಜಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ರವರು , ಕಾಪು ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಶಿರ್ವ- ಮಟ್ಟಾರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯ ಬಹುಪಾಲು ಶ್ರೇಯಸ್ಸು ಇಗ್ನೇಷಿಯಸ್ ಡಿಸೋಜರವರಿಗೆ ಸಲ್ಲುತ್ತದೆ. ಅವರ ಮಾತುಗಳು ಒರಟಾಗಿದ್ದರೂ ಜನರ ಕಷ್ಟ- ಸಮಸ್ಯೆ ಗಳಿಗೆ ಸ್ಪಂದಿಸಿವ ಮೃದು ಸ್ವಭಾವದವವರಾಹಿದ್ದರು. ಅವರ ನಿಧನದಿಂದಾಗಿ ನಿಜಾರ್ಥದಲ್ಲಿ ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಬಹು ದೊಡ್ಡ ನಷ್ಟ ಉಂಟಾಗಿದೆ ಎಂದು ನುಡಿನಮನ ಸಲ್ಲಿಸಿದರು. ಕೆ. ಪಿ. ಸಿ. ಸಿ ಯ ಪ್ರಧಾನ ಕಾರ್ಯದರ್ಶಿ ಹಾಗೂ ಇಗ್ನೇಷಿಯಸ್ ಡಿಸೋಜರವರ ಬಹುಕಾಲದ ಒಡನಾಡಿ ಎಂ.ಎ. ಗಫೂರ್ ರವರು ತಮ್ಮ ರಾಜಕೀಯ ಜೀವನದಲ್ಲಿ ಇಗ್ನೇಷಿಯಸ್ ರೊಂದಿಗೆ ಪಕ್ಷದ ಕೆಲಸ- ಕಾರ್ಯಗಳಲ್ಲಿ ಹೇಗೆ ತೊಡಗಿಸಿಕೊಂಡಿದ್ದರು ಮತ್ತು ಅವರ ಪಕ್ಷನಿಷ್ಠೆ, ಕಾರ್ಯತತ್ಪರತೆ ಹಾಗೂ ಜನಸೇವೆಯ ಬಗ್ಗೆ ಬೆಳಕು ಚೆಲ್ಲಿದರು. ಜೊತೆಗೆ, ಇತ್ತೀಚೆಗೆ ನಿಧನ ರಾದ ರಂಗಭೂಮಿ, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಗೈಯುವ ಮೂಲಕ ಪ್ರಖ್ಯಾತರಾಗಿದ್ದ ,ಕಾಪು ತಾಲೂಕು ರಚನಾ ಹೋರಾಟ ಸಮಿತಿಯ ಸಂಚಾಲಕರಾಗಿದ್ದ ಸಮಾಜ ಸೇವಕ ಕೆ. ಲೀಲಾಧರ್ ಶೆಟ್ಟಿ ಯವರಿಗೆ ಹಾಗೂ ಅಗಲಿದ ಇನ್ನೋರ್ವ ಗಣ್ಯವ್ಯಕ್ತಿ , ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆಗೈದು ವಿಧಿವಶರಾದ ಪಡುಬಿದ್ರಿಯ ಶಬ್ಬೀರ್ ಹುಸೇನ್ ಸಾಹೇಬ್ ರವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ವಹಿಸಿದ್ದರು. ಸಭೆಯಲ್ಲಿ ಪಕ್ಷದ ಪ್ರಮುಖರಾದ ಶಿವಾಜಿ ಸುವರ್ಣ ಬೆಳ್ಳೆ, ವಿಕ್ರಮ್ ಕಾಪು, ವಿನಯ್ ಬಲ್ಲಾಳ್, ಗೀತಾ ವಾಗ್ಲೇ, ಶಾಂತಲತಾ ಶೆಟ್ಟಿ, ಸರಸು ಡಿ. ಬಂಗೇರ, ದೀಪಕ್ ಎರ್ಮಾಳ್, ಮೊಹಮ್ಮದ್ ಸಾದಿಕ್, ಪ್ರಶಾಂತ್ ಜತ್ತನ್ನ, ಶರ್ಫುದ್ದೀನ್ ಶೇಖ್, ಸುಮನ್ ಬೋಳಾರ್, ದಯಾನಂದ್ ಬಂಗೇರ, ಪ್ರಭಾ ಬಿ. ಶೆಟ್ಟಿ, ಪ್ರಮೀಳಾ ಜತ್ತನ್ನ , ಪ್ರಶಾಂತ್ ಸಾಲಿಯಾನ್ ಕುರ್ಕಾಲ್, ವಿಲ್ಸನ್ ರಾಡ್ರಿಗಸ್, ಮೇಲ್ವಿನ್ ಡಿಸೋಜ, ಸುಜಾತ ಪೂಜಾರಿ, ಯು.ಸಿ.ಶೇಖಬ್ಬ, ರತನ್ ಶೆಟ್ಟಿ, ಮೊಹಮ್ಮದ್ ನಯೀಮ್, ರಂಜನಿ ಹೆಗ್ಡೆ, ಕೆ. ಎಚ್. ಉಸ್ಮಾನ್, ಹಸನಬ್ಬ ಶೇಖ್, ಶೋಭಾ ಬಂಗೇರ, ಸತೀಶ್ ಚಂದ್ರ ಮೂಳೂರ್, ರಾಧಿಕಾ ಸುವರ್ಣ, ಆಸಿಫ್ ಮೂಳೂರು, ಪ್ರಭಾಕರ್ ಕೈಪುಂಜಾಲ್, ರಾಜೇಶ್ ಶೆಟ್ಟಿ ಪಾಂಗಳ, ಎಚ್.ಅಬ್ದುಲ್ಲಾ, ಇಮ್ರಾನ್ ಮಜೂರು, ಕೇಶವ್ ಸಾಲ್ಯಾನ್, ಜ್ಯೋತಿ ಮೆನನ್, ಸುಚರಿತ ಲಕ್ಷ್ಮಣ್, ರೀನಾ ಡಿಸೋಜ, ಪ್ರಭಾಕರ್ ಪಾಲನ್, ಪ್ರಕಾಶ್ ಮಾಬಿಯಾನ್, ಜೇಬಾ ಸೆಲ್ವನ್, ತಸ್ನಿನ್ ಅರಃ, ಮುಬಿನ ಲಿಯಖತ್, ಶೇಖರ್ ಸಾಲಿಯಾನ್, ಸುಶೀಲ್ ಬೋಳಾರ್, ನಾಗಭೂಷಣ್ ರಾವ್, ದೇವರಾಜ್ ಕೋಟ್ಯಾನ್, ಖಲಂದರ್ ಶಾಫಿ, ನಿಜಾಮುದ್ದೀನ್, ಬಾಲಕೃಷ್ಣ ಕೋಟ್ಯಾನ್, ಸತೀಶ್ ದೇಜಾಡಿ, ಅಶೋಕ್ ನಾಯರಿ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ಲಾಕ್ ಸಮಿತಿ ಪ್ರಧಾನ ಕಾರ್ಯದರ್ಶಿ ಗಳಾದ ಅಮೀರ್ ಕಾಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ದಿನೇಶ್ ಕೋಟ್ಯಾನ್ ಪಲಿಮಾರ್ ಧನ್ಯವಾದವಿತ್ತರು.

