×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ (ರಿ ) ಅಧ್ಯಕ್ಷರಾಗಿ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಪುನರಾಯ್ಕೆ

ಪಡುಕುತ್ಯಾರು : ವಿಶ್ವಬ್ರಾಹ್ಮಣ ಸಮಾಜದ ಕುಲಗುರುಪೀಠದ ಪ್ರಧಾನ ಆಡಳಿತ ಮಂಡಳಿಯಾದ
ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ (ರಿ ) ಕಟಪಾಡಿ ಪಡು ಕುತ್ಯಾರು ಉಡುಪಿ ಜಿಲ್ಲೆ ಇದರ ವಾರ್ಷಿಕ ಮಹಾಸಭೆ ಮತ್ತು ಆಡಳಿತ ಮಂಡಳಿಯ 2023 ನೇ ಡಿ.31ರಂದು ನಡೆಯಿತು. ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮಿಗಳವರು ಪರಮ ಸಂರಕ್ಷಕರಾಗಿರುವ ಆನೆಗುಂದಿ ಪ್ರತಿಷ್ಠಾನದ
2023-2026 ಸಾಲಿನ ಅವಿರೋಧ ವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳ ವಿವರಗಳು ಇಂತಿದೆ.
ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು. ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ್ ಶ್ರೀ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರು ಶ್ರೀಮತ್ ಆನೆಗುಂದಿ ಮಹಾಸಂಸ್ಥಾನ ಪ್ರತಿಷ್ಠಾನದ ಅಧ್ಯಕ್ಷರಾಗಿ ಎರಡನೇ ಬಾರಿ ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ 5ನೇ ಅವಧಿಗೆ ಲೋಕೇಶ್ ಎಂ.ಬಿ ಆಚಾರ್ ಕಂಬಾರ್‌ ಪುನರಾಯ್ಕೆಯಾದರೆ, ಕೋಶಾಧಿಕಾರಿಯಾಗಿ ಅರವಿಂದ ಆಚಾರ್ಯ ಬೆಳುವಾಯಿ 2 ನೇ ಬಾರಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ನ್ಯಾಯವಾದಿ ಪ್ರಭಾಕರ ಆಚಾರ್ಯ ಕೋಟೆ ಕಾರು ಮಧೂರು, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಕಾಡಬೆಟ್ಟು ನಾಗರಾಜ ಆಚಾರ್ಯ ಉಡುಪಿ ಆಯ್ಕೆಗೊಂಡರು. ಹಾಗೂ ಕಾರ್ಯದರ್ಶಿಗಳಾಗಿ ಶ್ರೀಧರ್ ಜೆ ಆಚಾರ್ಯ ಕಟಪಾಡಿ,ಜನಾರ್ಧನ ಆಚಾರ್ಯ ಕನ್ಯಾನ, ಪ್ರಶಾಂತ್ ಡಿ ಆಚಾರ್ಯ ಕಟಪಾಡಿ, ಕೆ. ರಾಘವೇಂದ್ರ ಆಚಾರ್ಯ ಉಡುಪಿ, ಆಯ್ಕೆಗೊಂಡರು. ಆನೆಗುಂದಿ ಪ್ರತಿಷ್ಠಾನದ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಕೆ ಎಂ ಗಂಗಾಧರ ಆಚಾರ್ಯ ಕೊಂಡೆಯೂರು ನೇಮಕಗೊಂಡರು. ಪ್ರಥಮ ವಿಶ್ವಸ್ಥರಾಗಿ ಸಮಾಜದ 21 ಕಾಳಿಕಾಂಬಾ ದೇವಸ್ಥಾನಗಳ ಆಡಳಿತ ಮೊಕ್ತೇಸರರುಗಳನ್ನು ಅಡಳಿತ ಮಂಡಳಿಯಲ್ಲಿ ಮುಂದುವರಿಸಲಾಯಿತು. ಮಹಾಸಂಸ್ಥಾನದ ಟ್ರಸ್ಟ್ ಗಳಾದ ಅಸೆಟ್, ಗೋಶಾಲಾ ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್, ಆನೆಗುಂದಿ ಗುರು ಸೇವಾ ಪರಿಷತ್ತು ಕೇಂದ್ರ ಸಮಿತಿ , ಶ್ರೀ ಸರಸ್ವತಿ ಮಾತ್ರ ಮಂಡಳಿ ಇವುಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಕ್ರಮವಾಗಿ ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ ಆಚಾರ್ಯ,ಗುರುರಾಜ್ ಕೆ ಜೆ ಆಚಾರ್ಯ ಮಂಗಳೂರು, ಸುಂದರ ಆಚಾರ್ಯ ಬೆಳುವಾಯಿ, ಸುರೇಶ್ ಡಿ ಆಚಾರ್ಯ ಕಟಪಾಡಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಐ. ಲೋಲಾಕ್ಷ ಶರ್ಮಾ ಕಟಪಾಡಿ ,ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ. ರಮಾ ನವೀನ್ ಆಚಾರ್ಯ ಕಾರ್ಕಳ, ಆನೆಗುಂದಿ ಮೂಲ ಮಠದ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ ಖಾಯಂ ವಿಶ್ವಸ್ಥರಾಗಿ ನಿಯುಕ್ತಿಗೊಂಡರು.
ಈ ಮೊದಲೇ ಇರುವ ವಿಶ್ವಸ್ಥ ಮಂಡಳಿಗೆ ಸಮಾಜದಿಂದ ಹೆಚ್ಚುವರಿ ವಿಶ್ವಸ್ಥರಾಗಿ ಜಿ.ಟಿ ಆಚಾರ್ಯ ಮುಂಬೈ, ಅಚ್ಯುತ ಆಚಾರ್ಯ ಉಡುಪಿ, ದಯಾನಂದ ಆಚಾರ್ಯ ತೆಂಕನಿಡಿಯೂರು,ವಿಠಲ ಆಚಾರ್ಯ ಎಲ್ಲೂರು, ರವೀಂದ್ರ ಮಂಗಳಾದೇವಿ, ಬಾಲಕೃಷ್ಣ ಆಚಾರ್ಯ ಮೂಡಬಿದರೆ, ಶಿವರಾಮ ಆಚಾರ್ಯ ಉಳಿಯ, ಜಗದೀಶ್ ಆಚಾರ್ಯ ಪಡುಪಣಂಬೂರು ಸೇರ್ಪಡೆಗೊಳಿಸಲಾಯಿತು. ವಿಶೇಷ ಆಹ್ವಾನಿತರಾಗಿ ವಿಶ್ವಕರ್ಮ ಬ್ಯಾಂಕ್ ಅಧ್ಯಕ್ಷ ಡಾ.ಹರೀಶ್ ಆಚಾರ್ಯ ಜಲಕದ ಕಟ್ಟೆ,ಎಸ್ ಕೆ ಜಿ ಐ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರಡೂರು,ಹರಿಶ್ಚಂದ್ರ ಎನ್ ಆಚಾರ್ಯ ಬೆಂಗಳೂರು, ಅಲೆವೂರು ಯೋಗೀಶ್ ಆಚಾರ್ಯ ಉಡುಪಿ, ರಾಘವೇಂದ್ರ ಆಚಾರ್ಯ ಸಾಹೇಬರ ಕಟ್ಟೆ, ನೇಜಾರು ವಿಶ್ವನಾಥ ರಾವ್ ದೋಹ ಕತಾರ್,ಎಂ ಪಿ ಮೋಹ ಆಚಾರ್ಯ ಉಡುಪಿ ಇವರನ್ನು ಸೇರ್ಪಡೆಗೊಳಿಸಲಾಯಿತು. ಸಭೆಯಲ್ಲಿ ವಿಶ್ವಸ್ತರಾದ ಪಿ. ವಿ ಗಂಗಾಧರ ಆಚಾರ್ಯ ಉಡುಪಿ, ಕೇಶವ ಆಚಾರ್ಯ ಮಂಗಳೂರು, ತ್ರಾಸಿ ಸುಧಾಕರ ಆಚಾರ್ಯ, ಜಯ ಕರ ಆಚಾರ್ಯ ಕರಂಬಳ್ಳಿ, ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ಬಂಬ್ರಾಣ ಯಜ್ಞೇಶ್ ಆಚಾರ್ಯ ಮಂಗಳೂರು, ಶೇಖರ ಆಚಾರ್ಯ ಕಾಪು, ಕೆ ಸುಂದರ ಆಚಾರ್ಯ ಕೋಟೆಕಾರು, ಜನಾರ್ಧನ ಆಚಾರ್ಯ ಆರಿಕ್ಕಾಡಿ ಕುಂಬಳೆ, ಪುರೋಹಿತ ಅಕ್ಷಯ ಶರ್ಮ ಕಟಪಾಡಿ, ಪುರುಷೋತ್ತಮ ಆಚಾರ್ಯ ಪುತ್ತೂರು, ರಾಜು ಎನ್ ಆಚಾರ್ಯ ಬೆಳ್ಳಂಪಳ್ಳಿ, ಕೆ. ವಾಸುದೇವ ಆಚಾರ್ಯ ಕುಂಬಳೆ, ಪೆರ್ಣೆ ಮಧುಸೂದನ ಆಚಾರ್ಯ ಕಾಸರಗೋಡು, ದಿನೇಶ ಆಚಾರ್ಯ ಕಿನ್ನಿಗೋಳಿ,ಗಣೇಶ್ ಆಚಾರ್ಯ ಸಾಲಿಗ್ರಾಮ, ಉದಯ ಕುಮಾರ್ ಆಚಾರ್ಯ ಕಟ್ ಬೆಲ್ತೂರು, ಯಜ್ಞೇಶ್ವರ ಆಚಾರ್ಯ ಕುತ್ಯಾರು, ಹರೀಶ್ ಆಚಾರ್ಯ ಕಾರ್ಕಳ, ನಲ್ಕ ರಾಮಚಂದ್ರ ಆಚಾರ್ಯ, ನಿಟ್ಟೆ ಸುರೇಶ್ ಆಚಾರ್ಯ ಕಾರ್ಕಳ, ಸುರೇಶ್ ಆಚಾರ್ಯ ಇರಂದಾಡಿ, ರೂಪೇಶ್ ಆಚಾರ್ಯ ಶಿರ್ವ, ಗಣೇಶ್ ಆಚಾರ್ಯ ಕೋಟ,ಮೋಹನ್ ಕುಮಾರ್, ಬೆಳ್ಳೂರು, ಯೋಗೀಶ್ ಆಚಾರ್ಯ ಕರಂಬಳ್ಳಿ, ಪ್ರಸನ್ನ ಆಚಾರ್ಯ ಕಾಪು,ದೀಪ ಸುರೇಶ್ ಆಚಾರ್ಯ ಕಟಪಾಡಿ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ ಸ್ವಾಗತಿಸಿ, ನೂತನ ಉಪಾಧ್ಯಕ್ಷ ಕಾಡಬೆಟ್ಟು ನಾಗರಾಜ ಆಚಾರ್ಯ ಉಡುಪಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *