ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(SKPA) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಇದರ ನೂತನ ಜಿಲ್ಲಾಧ್ಯಕ್ಷರಾಗಿ ಶಿಲ್ಪಾ ಡಿಜಿಟಲ್ಸ್ ಕಾರ್ಕಳ ಇದರ ಮಾಲಕರಾಗಿರುವ ಪದ್ಮಪ್ರಸಾದ್ ಜೈನ್ ಆಯ್ಕೆಯಾಗಿದ್ದಾರೆ. ಜೆಸಿಐ ಕಾರ್ಕಳದ ಪೂರ್ವ ಅಧ್ಯಕ್ಷರು , ಜೆಸಿಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಭಾರತೀಯ ಜೇಸಿಐ ನ ವಲಯ ಸಂಯೋಜಕರಾಗಿ,ಗುರುತಿಸಿಕೊಂಡವರು ಹಾಗೂ ಕಳೆದ ಸಾಲಿನ ಎಸ್‍ಕೆಪಿಎ ಇದರ ಉಪಾಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸಿದವರು. ಇವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿ ಸಮಾಜದಲ್ಲೂ ಉತ್ತಮ ಸೇವೆಯನ್ನು ಮಾಡುತ್ತ ಬರುತ್ತಿದ್ದಾರೆ. ಮೂಲತಃ ನೆಲ್ಲಿಕಾರಿನವರಾದ ಪದ್ಮ ಪ್ರಸಾದ್ ರವರು ದಿವಂಗತ ರತ್ನವರ್ಮ ಶೆಟ್ಟಿ ಹಾಗೂ ಲಕ್ಷ್ಮೀಮತಿ ಅಮ್ಮನವರ ಪುತ್ರ. ಖ್ಯಾತ ಅಂತರಾಷ್ಟ್ರೀಯ ಛಾಯಾಗ್ರಹಕ ಜಿನೇಶ್ ಪ್ರಸಾದ್ ರವರ ಸಹೋದರ.

