×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸುರತ್ಕಲ್: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ನಜ್ಜುಗುಜ್ಜಾದ ಕಾರು

ಸುರತ್ಕಲ್:  ಅಜಾಗರೂಕತೆಯಿಂದ ಚಲಿಸಿದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಮುಂಭಾಗದ ಹೋರ್ಡಿಂಗ್, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಘಟನೆ  ಸುಭಾಷಿತ ನಗರ ಜಂಕ್ಷನ್ ಬಳಿ   ನಡೆದಿದೆ.ಆಸ್ಪತ್ರೆಯೊಂದರ ವೈದ್ಯ ಹಾಗೂ ಮತ್ತೊಬ್ಬರು ಆ ಕಾರಿನಲ್ಲಿದ್ದರು. ಅಪಘಾತದ ಪರಿಣಾಮ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರುದ್ಧ ದಿಕ್ಕಿನಿಂದ ಸುಭಾಷಿತನಗರ ಕಡೆಗೆ ಹೋಗಲು ಕಾರು ಚಾಲಕ ಏಕಾಏಕಿ ಹೆದ್ದಾರಿಗೆ ನುಗ್ಗಿದ್ದು, ಈ ವೇಳೆ ಉಡುಪಿ ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಚಾಲಕ ಬಲಬದಿಗೆ ತಿರುಗಿಸಿದ್ದರಿಂದ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪರಾಗಿದ್ದಾರೆ. ಇಲ್ಲದಿದ್ದರೆ ಭೀಕರ ಅಪಘಾತ ಸಂಭವಿಸುತ್ತಿತ್ತು ಎನ್ನಲಾಗುತ್ತದೆ. ಸ್ಥಳಕ್ಕೆ ಬೈಕಂಪಾಡಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ,

Leave a Reply

Your email address will not be published. Required fields are marked *