×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ: ಶಿವಾಯ ಫೌಂಡೇಶನ್ ಮೂಲಕ ಶೈಕ್ಷಣಿಕ ಸಹಾಯ

ಪಡುಬಿದ್ರಿ, ಸೆ. ೧೬: ಶಿವಾಯ ಫೌಂಡೇಶನ್ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಗೈಯುತ್ತಿದೆ. ದೂರದ ಮುಂಬಯಿನಲ್ಲಿ ದುಡಿದು ಸಂಬಳದ ಒಂದಂಶವನ್ನು ಬಡವರ ಏಳಿಗೆಗಾಗಿ ಶಿಕ್ಷಣ, ಆರೋಗ್ಯ ಹಾಗೂ ಮಾನವೀಯತೆಯ ಕಾರ್ಯಗಳಿಗೆ ಇವರು ನೀಡುತ್ತಿದ್ದಾರೆ. ಪಾರದರ್ಶಕತೆ ಇವರಲ್ಲಿದೆ ಎಂದು ಆಸ್ಪೆನ್ ಇನ್ಫ್ರಾದ ಮಹಾ ಪ್ರಬಂಧಕ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು. ಅವರುಮುಂಬಯಿನ ಶಿವಾಯ ಫೌಂಡೇಶನ್ ನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಸೆ. ೧೬ರಂದು ಪಡುಬಿದ್ರಿ ಬಂಟರ ಭವನದ ಕೃಷ್ಣ ಸುಧಾಮ ಸಭಾಂಗಣದಲ್ಲಿ ಮುಂಬಯಿನ ಶಿವಾಯ ಫೌಂಡೇಶನ್ ವತಿಯಿಂದ ನಡೆಸಲಾದ ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ -೨೦೨೩ ಅನ್ನು ಉದ್ಘಾಟಿಸಿ ಮಾತನಾಡಿದರು. ವಿಶೇಷ ಅತಿಥಿಗಳಾಗಿದ್ದ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ ಶೆಟ್ಟಿ ಮಾತನಾಡಿ, ಶಿವಾಯ ಫೌಂಡೇಶನ್ ನ ಐದನೇ ವರ್ಷದ ಕಾರ್ಯಕ್ರಮವಿದು. ಈ ಸಂಸ್ಥೆಯು ಇನ್ನಷ್ಟು ಬೆಳಗಲಿ ಎಂದರು. ವೇ| ಮೂ| ಹೆಜಮಾಡಿ ಹರಿದಾಸ ಭಟ್ ಆಶೀರ್ವದಿಸಿದರು. ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ವಹಿಸಿ ಮಾತನಾಡಿದರು ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶಶಿಕಲಾ ಪೂಜಾರಿ, ಪಲಿಮಾರು ಗ್ರಾ. ಪಂ. ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಹೊಟೇಲ್ ಪಲ್ಲವಿಯ ಮಾಲಕ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹೆಜಮಾಡಿ ಪ್ರೇಮಾಲಯದ ಪ್ರೇಮನಾಥ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ನವೀನ್ ಎನ್. ಶೆಟ್ಟಿ, ಪಡುಬಿದ್ರಿ ಪಿಎಸ್ ಐ ಪ್ರಸನ್ನ ಎಂ. ಎಸ್, ರಾಷ್ಟ್ರೀಯ ಕ್ರೀಡಾಪಟು ಪ್ರಕಾಶ್ ಶೆಟ್ಟಿ, ಆದ್ಯ ಫೌಂಡೇಶನ್ ನ ರಾಕೇಶ್ ಅಜಿಲ ಕೆ. ಆರ್., ಪಲಿಮಾರು ಗ್ರಾ. ಪಂ. ಉಪಾಧ್ಯಕ್ಷ ರಾಯೇಶ್ವರ ಪೈ, ಪಲಿಮಾರು ಗ್ರಾ. ಪಂ‌. ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು ಉಪಸ್ಥಿತರಿದ್ದರು. ಅಧ್ಯಾಪಕ ಕೆ. ರಾಜೇಂದ್ರ ಭಟ್ ಹಾಗೂ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಅವರನ್ನು ಸಮ್ಮಾನಿಸಲಾಯಿತು. ರಾಜೇಂದ್ರ ಭಟ್ ಸಮ್ಮಾನಕ್ಕುತ್ತರಿಸಿದರು.
ಪ್ರಶಾಂತ್ ಶೆಟ್ಟಿ ಪಲಿಮಾರು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಹಾಗೂ ಡಾ| ಸ್ವರ್ಣಲತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು

Leave a Reply

Your email address will not be published. Required fields are marked *