×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶಿರ್ವ: ಪೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪೋಕ್ಸೋ ಕಾಯ್ದೆ ,ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆ ಮತ್ತು ಮಾದಕ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ

ಶಿರ್ವ: ಪೈಝಲ್ ಇಸ್ಲಾಂಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿನಾಂಕ 11/ 9 /20 23ರಂದು ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯು ಪೋಕ್ಸೋ ಕಾಯ್ದೆ ,ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆ ಮತ್ತು ಮಾದಕ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದರು. ಸಭೆಯಲ್ಲಿ ಶ್ರೀಯುತ ಮಂಜುನಾಥ್ ಅಡಿಗ ಶ್ರೀಮತಿ ಜ್ಯೋತಿ ಶ್ರೀಮತಿ ಸುಮಿತ್ರ ಪೊಲೀಸ್ ಸಿಬ್ಬಂದಿ ವರ್ಗದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿ ಶೇಕ್ ಆಝೀ ನ್ ಮೆಹತಾಜ್ ಸ್ವಾಗತಿಸಿದರು. ಶಾಲಾ ಆಡಳಿತ ಅಧಿಕಾರಿ ಶ್ರೀಯುತ ಮಹಮ್ಮದ್ ಇಕ್ಬಾಲ್ ಸಭೆಯನ್ನು ಉದ್ದೇಶಿಸಿ ಪ್ರಾಸ್ತವಿಕವಾಗಿ ಮಾತನಾಡಿದರು . . ಪೋಲಿಸ್ ಅಧಿಕಾರಿಗಳು ಮಕ್ಕಳಿಗೆ ಈ ಕಾಯ್ದೆಯ ಮಾಹಿತಿಯನ್ನು ನೀಡಿದರು. ಮಕ್ಕಳ ಸಮಸ್ಯೆಗಳನ್ನು ಆಲಿಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಅವರುಈ ಸಮಾಜದಲ್ಲಿ ಯಾವುದೇ ಸಮಸ್ಯೆ ಬಂದರು ಎದುರಿಸುವ ಧೈರ್ಯ ತುಂಬಿದರು. ಶ್ರೀಯುತ ಮಹಮ್ಮದ್ ಇಕ್ಬಾಲ್ ರವರು ಸಭೆಯಲ್ಲಿರುವ ಅತಿಥಿಗಳನ್ನು ವಂ ದಿಸಿದರು. ಸಹ ಶಿಕ್ಷಕಿ ಶ್ರೀಮತಿ ವಫಾ ರವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *