×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಿ.ಕೆ.ಎಸ್ ಪ್ರೌಢಶಾಲೆ ಕಳತ್ತೂರು ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನೆ

ಪೈಯ್ಯಾರು ಕರಿಯಣ್ಣ ಶೆಟ್ಟಿ (ಪಿ.ಕೆ.ಎಸ್) ಪ್ರೌಢಶಾಲೆ, ಕಳತ್ತೂರು ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಇಂದು ದಿನಾಂಕ 10-06-2023 ರಂದು ಅಭಿನಂದನಾ ಕಾರ್ಯಕ್ರಮ ನೆರವೇರಿತು. ಅಭಿನಂದನೆ ಸ್ವೀಕರಿಸಿ ಶಾಸಕರು ಮಾತನಾಡಿ ವಿದ್ಯಾರ್ಥಿಗಳಿಗೆ ನಾನು ಕನ್ನಡ ಮೀಡಿಯಂ ಎಂಬ ಕೀಳರಿಮೆ ಬೇಡ. ಮನುಷ್ಯ ಪ್ರಯತ್ನ ಪಟ್ಟರೆ ಏನನ್ನು ಸಾಧಿಸಬಹುದು ಪ್ರತಿ ವಿದ್ಯಾರ್ಥಿಯಲ್ಲೂ ಅವರದ್ದೇ ಆದ ಪ್ರತಿಭೆ ಇದ್ದೇ ಇರುತ್ತದೆ. ಆತ್ಮವಿಶ್ವಾಸದಿಂದ ಮುಂದೆ ಸಾಗಿ ಎಂದರು. ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ನಿತ್ಯಾನಂದ ಆರ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಗುರ್ಮೆ, ಸಂಚಾಲಕರಾದ ಶಿವರಾಮ ಶೆಟ್ಟಿ, ಖಜಾಂಚಿಗಳಾದ ಅರುಣ ಡಿ ಶೆಟ್ಟಿ, ಸದಸ್ಯರುಗಳಾದ ಲವ ಶೆಟ್ಟಿ, ವೇಣುಗೋಪಾಲ ಎಂ, ಯೋಗೀಶ್ ಆಚಾರ್ಯ, ಕಾಂತಾರ ಟೈಲರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಪೈಯ್ಯಾರ್, ಶಾಲಾ ಮುಖ್ಯ ಶಿಕ್ಷಕರಾದ ಗಂಗಾ ನಾಯ್ಕ ಉಪಸ್ಥಿತರಿದ್ದರು. ಚಂದ್ರಕಾಂತ ನಾಯ್ಕ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *