
ಕಾರ್ಕಳ ವಿಧಾನಸಭಾ ಕ್ಷೇತ್ರದ ರೆಂಜಾಳ ಗ್ರಾಮದ 17 ಜನ ಬಿಜೆಪಿ ಕಾರ್ಯಕರ್ತರು ರೆಂಜಾಳ ರಮೇಶ್ ಶೆಟ್ಟಿ , ಪ್ರವೀಣ್ ಶೆಟ್ಟಿ, ಜೀವನ್ ಹಾಗೂ ಸಾಧಿಕ್ ರೆಂಜಾಳ ಇವರುಗಳ ಮುಂದಾಳತ್ವದಲ್ಲಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು . ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಲ್ ಚುನಾವಣಾ ಕಾರ್ಯಾಲಯದಲ್ಲಿ ಪ್ರಚಾರ ಸಮಿತಿ ಅದ್ಯಕ ಶುಭದರಾವ್, ಪುರಸಭೆಯ ವಿಪಕ್ಷ ನಾಯಕ ಅಶ್ಪಾಕ್ ಅಹ್ಮದ್, ಸುಬೀತ್ N.R, ವಲೇರಿಯನ್ ಪಾಯಸ್, ಜಿಲ್ಲಾ ಕಾಂಗ್ರೆಸ್ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಧುರಾಜ್ ಶೆಟ್ಟಿ, ಪುರಸಭೆ ಸದಸ್ಯರಾದ ಪ್ರತಿಮಾ ರಾಣೆ, ನಳಿನಿ ಆಚಾರ್ಯ,ನಗರ ಮಹಿಳಾ ಅಧ್ಯಕ್ಷೆ ಕಾಂತಿ ಶೆಟ್ಟಿ ಇವರಿಗೆ ಪಕ್ಷದ ಧ್ವಜ ಕೊಟ್ಟು ಬರಮಾಡಿಕೊಂಡರು.

