ಕರ್ನಾಟಕ ರಾಜ್ಯ ಸರಕಾರದ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತರಿಗೆ ಪುರಸಭಾ ವ್ಯಾಪ್ತಿಯ ಪತ್ತೊಂಜಿಕಟ್ಟೆ ಪ್ರದೇಶದಲ್ಲಿ ಗುಂಪು ಮನೆಗಳು ನಿರ್ಮಾಣವಾಗುತ್ತಿದ್ದು ಕೇವಲ ಒಂದು ಲಕ್ಷ ರೂಪಾಯಿಗೆ 300 ಚದರ ಅಡಿಯ ಮನೆಯನ್ನು ಪಡೆಯಲು ಅವಕಾವಿದೆ ಸ್ವಂತ ಮನೆ ಹೊಂದುವ ಕನಸು ಕಂಡವರು ಅರ್ಜಿ ಸಲ್ಲಿಸುವಂತೆ ಪುರಸಭೆಯ ವಿಪಕ್ಷ ನಾಯಕ ಶುಭದರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಒಟ್ಟು 250 ಗುಂಪು ಮನೆಗಳ ಪೈಕಿ, ಈಗಾಗಲೇ 97 ಅರ್ಜಿದಾರರು ಮುಂಗಡ ಪಾವತಿಸಿ ಅರ್ಜಿಯನ್ನು ಸಲ್ಲಿಸಿದ್ದು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಮನೆ ಮತ್ತು ಜಮೀನು ಇಲ್ಲದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ರಾಜ್ಯದ ಇತರ ಎಲ್ಲಾ ಕಡೆಗಳಲ್ಲಿ ಈ ಯೋಜನೆಯು ಯಶಸ್ವಿಯಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಇಲ್ಲಿಯೂ ಶೀಘ್ರ ನಿವೇಶನ ಹಂಚಿಕೆಗೆ ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಆಸಕ್ತರು ಪುರಸಭೆಯ ಕಚೇರಿಯ ಸಿಬಂದಿಗಳನ್ನು ಸಂಪರ್ಕಿಸುವಂತೆ ಶುಭದರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ

