
ಪಡುಬಿದ್ರಿ : ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸಿ, ಕೂರೂನಾ ಲಾಕ್ಸ್‌ನ್ ಸಮಯದಲ್ಲಿ ಕಿಟ್ ವಿತರಣೆ, ಈದ್ ಕಿಟ್ ವಿತರಣೆ, ಸ್ವಚ್ಛತಾ ಕಾರ್ಯ, ಸಮಾಜ ಸೇವೆಯಲ್ಲಿ ತೊಡಗಿರುವ ಸ್ಮಾಷರ್ಸ್ ವೆಲ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಇದರ ವಾರ್ಷಿಕ ಮಹಾಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರಮೀಝ್ ಹುಸೇನ್ ಪುನರಾಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಮೊಹಮ್ಮದ್ ಕೌಸರ್, ಉಪಾಧ್ಯಕ್ಷರಾಗಿ ನಸುಲ್ಲ, ರಾಝಿ, ಅನ್ವರ್. ಕೋಶಾಧಿಕಾರಿಯಾಗಿ ಮಿಶೆಲ್, ಕ್ಲಬ್ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಮುಸ್ತಾಕ್, ಅರ್ಶಾದ್, ಶಾಮಿಲ್, ಅಝಾಲ್, ಸಲಹೆಗಾರರಾಗಿ ಅಬ್ದುಲ್ ಮುತ್ತಲಿಬ್, ಕ್ರೀಡಾ ಕಾರ್ಯದರ್ಶಿಯಾಗಿ ರಿಯಾಝ್ ಆಯ್ಕೆಯಾದರು.

