
ಕಾರ್ಕಳ ವಿಧಾನಸಭಾ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿಯ ಅನೇಕ ಹಿರಿಯ ಮುಖಂಡರು ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರ ಕಾಂಗ್ರೇಸ್ ಸೇರ್ಪಡೆಗೊಂಡರು, ಸಾಣೂರು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷೆ ರಾಜೇಶ್ವರಿ ರವಿಪೂಜಾರಿ, ಪುರಸಭೆಯ ಮಾಜಿ ಅದ್ಯಕ್ಷ ಚಂದ್ರಹಾಸ್ ಸುವರ್ಣ, ಮುನಿಯಾಲ್ ಬಿಲ್ಲವ ಸಂಘದ ಸ್ಥಾಪಾದ್ಯಕ್ಷ ಬಿಜೆಪಿ ಹಿರಿಯ ಮುಖಂಡ ಆನಂದ ಪೂಜಾರಿ, ಉದ್ಯಮಿ ಬಿಜೆಪಿ ಮುಖಂಡ ಕಾಂತಾವರ ಉದಯ್ ಶೆಟ್ಟಿ. ಕುಕ್ಕುಂದೂರು ಪಂಚಾಯತ್ ಸದಸ್ಯ ಹಾಗೂ ನ್ಯಾಯ ಸಮಿತಿ ಅದ್ಯಕ್ಷ ರಮೇಶ್, ಮತ್ತು ಅನೇಕ ಗ್ರಾಮಗಳ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಪಕ್ಷ ಸೇರ್ಪಡೆಯಾದರು, ಜಿಲ್ಲಾ ಕಾಂಗ್ರೇಸ್ ಅದ್ಯಕ್ಷ ಅಶೋಕ್ ಕೊಡವೂರು, ಬ್ಲಾಕ್ ಅದ್ಯಕ್ಷ ಸದಾಶಿವ ದೇವಾಡಿಗ ಅಭ್ಯರ್ಥಿ ಉದಯ ಶೆಟ್ಟಿ ಪಕ್ಷದ ಧ್ವಜಕೊಟ್ಟು ಸ್ವಾಗತಿಸಿದರು.

