×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಟ್ವಿಟರ್ ನ ಲೋಗೋ ಬದಲಾಯಿಸಿದ ಎಲಾನ್ ಮಸ್ಕ್

ಟ್ವಿಟರ್ ಲೋಗೋ ವಿಚಾರದ ಅಪ್ ಡೇಟ್ ನಿಂದ ಮತ್ತೊಮ್ಮೆ ಸುದ್ದಿಯಾಗುತ್ತಿದ್ದು ಈ ಹಿಂದೆ ಟ್ವಿಟರ್ ನ ಲೋಗೋ ನೀಲಿ ಪಕ್ಷಿಯಾಗಿತ್ತು . ಬಹುತೇಕ ಜನರು ಟ್ವಿಟರ್ ಆರಂಭವಾದಾಗಿನಿಂದ ಅದನ್ನು ಗುರುತಿಸುವುದು ಜನಪ್ರಿಯ ನೀಲಿ ಪಕ್ಷಿಯ ಲೋಗೋದಿಂದಲೇ, ಆದರೆ ಇದೀಗ ಎಲಾನ್ ಮಸ್ಕ್ ಆ ಲೋಗೋವನ್ನೇ ಬದಲಾಯಿಸಿದ್ದಾರೆ. ಕೆಲ ಬಳಕೆದಾರರಿಗೆ ಸೋಮವಾರ ತಡರಾತ್ರಿ ಟ್ವಿಟರ್ ಗೆ ಲಾಗಿನ್ ಆಗುವ ವೇಳೆ ಪಕ್ಷಿಯ ಲೋಗೋದ ಬದಲಾಗಿ ನಾಯಿಯೊಂದರ ಲೋಗೋ ಕಾಣಿಸಿದ್ದು ಮಂಗಳವಾರ ಬೆಳಗ್ಗೆ ಇದು ಟ್ವಿಟರ್ ನ ಹೊಸ ಲೋಗೋ ಎನ್ನುವುದು ತಿಳಿದಿದೆ. ಎಲಾನ್ ಮಸ್ಕ್ ಕ್ರಿಪ್ಟೋಕರೆನ್ಸಿಯ ಮಿಮ್ ಗಾಗಿ ಬಳಕೆ ಆಗುತ್ತಿತ್ತ ಡಾಗಿ ಕಾಯಿನ್ ಚಿತ್ರವನ್ನು ಅಂದರೆ ಶಿಬಾ ಇನು ನಾಯಿಯ ಚಿತ್ರವನ್ನೇ ಟ್ವಿಟರ್ ನ ಹೊಸ ಲೋಗೋವಾಗಿ ಬಳಸಿಕೊಂಡಿದ್ದು ಈ ಕುರಿತು ಡಾಗಿ ಮಿಮ್ ಮೂಲಕ ಎಲಾನ್ ಮಸ್ಕ್ ಲೋಗೋ ಬದಲಾದ ವಿಚಾರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಹಿಂದೆ ವ್ಯಕ್ತಿಯೊಬ್ಬರು ಲೋಗೋವನ್ನು ಬದಲಾಯಿಸಿ ಎಂದು ಹೇಳಿದ ವಿಚಾರವನ್ನು ಮತ್ತೆ ಹಂಚಿಕೊಂಡಿದ್ದು ಟ್ವಿಟರ್ ನ ವೆಬ್ ವರ್ಷನ್ ನಲ್ಲಿ ಮಾತ್ರ ಲೋಗೋ ಬದಲಾಗಿದ್ದು ಮೊಬೈಲ್ ವರ್ಷನ್ ನಲ್ಲಿ ನೀಲಿ ಪಕ್ಷಿಯ ಲೋಗೋವೆ ಇದೆ.

Leave a Reply

Your email address will not be published. Required fields are marked *