×
Our website is made possible by displaying online advertisements to our visitors. Please consider supporting us by whitelisting our website.
  • 9880645340

(ಪಡುಬಿದ್ರಿ) ರೈಲು ನಿಲ್ದಾಣದ ಹೆಸರನ್ನು ಪಡುಬಿದ್ರಿ ಬದಲಿಗೆ ಪಣಿಯೂರು ಎಂದು ಪುನರ್ ನಾಮಕರಣ ಮಾಡಿ – ದೇವಿ ಪ್ರಸಾದ್ ಶೆಟ್ಟಿ

ಬೆಳಪು (ಪಡುಬಿದ್ರಿ) ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಮುಂಬಯಿ ಮತ್ತು ಬೆಂಗಳೂರು ರೈಲಿಗೆ ನಿಲುಗಡೆಗೊಳಿಸುವಂತೆ ದೇವಿ ಪ್ರಸಾದ್ ಶೆಟ್ಟಿ ಇವರ ನೇತೃತ್ವದಲ್ಲಿ ಇಂದು ಮನವಿ ನೀಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಳಪು ನಲ್ಲಿರುವ ರೈಲ್ವೇ ಸ್ಟೇಷನ್ ಗೆ ಪಡುಬಿದ್ರಿ ಎಂದು ಹೆಸರಿಡುವ ಮೂಲಕ ಆ ವೈಜ್ಞಾನಿಕಕ್ಕೆ ಅಂದೇ  ಚಾಲನೆ ಕೊಟ್ಟಿದ್ದಾರೆ ಇದು ಜನರಿಗೆ ಗೊಂದಲವನ್ನುಂಟು ಮಾಡುತ್ತದೆ ಬೆಳಪು (ಪಡುಬಿದ್ರಿ) ರೈಲು ನಿಲ್ದಾಣದ ಹೆಸರನ್ನು ಪಡುಬಿದ್ರಿ ಬದಲಿಗೆ ಪಣಿಯೂರು ಎಂದು ಪುನರ್ ನಾಮಕರಣ ಮಾಡಿ ಬೆಳಪು ಗ್ರಾಮಕ್ಕೆ ಗೌರವ ನೀಡಿ ಎಂದರು. ಕಾಪು ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿರುವ ಮತ್ತು ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ ಸಹಿತವಾಗಿ ಎಲ್ಲಾ ವಿಧದಲ್ಲೂ ಬೆಳೆಯುತ್ತಿರುವ ಬೆಳಪು ಗ್ರಾಮದಲ್ಲಿ ಕೊಂಕಣ ರೈಲು ಕರಾವಳಿಗೆ ಕಾಲಿಟ್ಟ ಪ್ರಾರಂಭದಲ್ಲೇ (1991-92) ಆರಂಭಗೊಂಡಿದ್ದ ಬೆಳಪು (ಪಡುಬಿದ್ರಿ) ರೈಲು ನಿಲ್ದಾಣವು ಇ೦ದಿಗೂ ಹಾಗೆಯೇ ಉಳಿದಿರುವುದು ಮತ್ತು ಉಡುಪಿ ಮತ್ತು ಮೂಲ್ಕಿ ರೈಲು ನಿಲ್ದಾಣಗಳ ಜೊತೆಗೆ ಪ್ರಾರಂಭಗೊಂಡಿದ್ದ ಬೆಳಪು (ಪಡುಬಿದ್ರಿ) ರೈಲು ನಿಲ್ದಾಣವು ಮೇಲ್ದರ್ಜೆಗೇರಬೇಕೆನ್ನುವುದು ನಮ್ಮೆಲ್ಲರ ಬಹುಕಾಲದ ಕನಸು. ಕಾಪು ತಾಲೂಕು ಕೇಂದ್ರ ಮತ್ತು ಕಾಪು ಪುರಸಭೆಗೆ ಹತ್ತಿರದಲ್ಲಿರುವ ರೈಲು ನಿಲ್ದಾಣವು ಬೆಳಪು, ಎಲ್ಲೂರು, ಮಜೂರು, ಕುತ್ಯಾರು, ಮುದರಂಗಡಿ, ಶಿರ್ವ, ಉಚ್ಚಿಲ, ಎರ್ಮಾಳು, ಪಡುಬಿದ್ರಿ ಗ್ರಾಮ ಪಂಚಾಯತ್ ಗಳ ಮಧ್ಯ ಭಾಗದಲ್ಲಿದ್ದು ರಾಷ್ಟ್ರೀಯ ಹೆದ್ದಾರಿ 66ಕ್ಕೂ ಸನಿಹದಲ್ಲಿದೆ.  ಬೆಳಪು (ಪಡುಬಿದ್ರಿ) ರೈಲು ನಿಲ್ದಾಣದ ಅಭಿವೃದ್ಧಿಯ ಬಗ್ಗೆ ಕಳೆದ 25 ವರ್ಷಗಳಿಂದಲೂ ನಿರಂತರ ಹೋರಾಟ ನಡೆಸುತ್ತಿದ್ದು, ಮತ್ತ್ವಗಂಧ ಮತ್ತು ಬೆಂಗಳೂರು ರೈಲುಗಳ ನಿಲುಗಡೆ ಬಗ್ಗೆ ಇಲಾಖೆ ಹಾಗೂ ಸ್ಥಳೀಯ ಶಾಸಕರು, ಸಂಸದರು ಮತ್ತು ಜನಪ್ರತಿನಿಧಿಗಳಿಗೂ ಮನವಿ ಹಲವು ಬಾರಿ ಮನವಿ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ರೈಲ್ವೇ ಸಚಿವ ಡಿ.ವಿ. ಸದಾನಂದ ಗೌಡ ಅವರೂ ಬೆಂಬಲ ಸೂಚಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದರೂ ಇಲಾಖೆ ಮಾತ್ರಾ ಈ ಬಗ್ಗೆ ದಿವ್ಯ ಮೌನ ವಹಿಸಿರುವುದನ್ನು ಖಂಡಿಸಿ ಮತ್ತೆ ಸಭೆ ಸೇರಿ, ಎಲ್ಲಾ ಗ್ರಾಮಗಳ ಜನರ ಉಪಸ್ಥಿತಿಯಲ್ಲಿ ನಮ್ಮ ಬೇಡಿಕೆಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ನಮ್ಮ ಬೇಡಿಕೆಗಳಿಗೆ ಇನ್ನೂ ಸೂಕ್ತ ಸ್ಪಂಧನೆ ಅಥವಾ ಪ್ರತಿಕ್ರಿಯೆಗಾಗಿ ಒಂದು ತಿಂಗಳು ಕಾಯುತ್ತೇವೆ. ಮುಂದೆಯೂ ಸೂಕ್ತ ಸ್ಪಂಧನ ದೊರಕದಿದ್ದಲ್ಲಿ ಸಾವಿರಾರು ಮಂದಿಯನ್ನು ಸೇರಿಸಿಕೊಂಡು ಬೃಹತ್‌ ಪ್ರತಿಭಟನೆ ಮತ್ತು ರೈಲ್ ರೋಕೋ ನಡೆಸಲು ತೀರ್ಮಾನಿಸಿದ್ದೇವೆ.ಎಂದು ಈ ಸಂದರ್ಭದಲ್ಲಿ ತಿಳಿಸಿದರು ನಂತರ ಸ್ಟೇಷನ್ ಮಾಸ್ಟರ್ ಗಣಪತಿ ನಾಯಕ್ ಇವರಿಗೆ ಮನವಿಯನ್ನು ನೀಡಲಾಯಿತು ಪಂಚಾಯತ್ಅ ಧ್ಯಕ್ಷರುಗಳು ಪಂಚಾಯತ್ ಸದಸ್ಯರುಗಳು ರಿಕ್ಷ ಚಾಲಕರ ಮಾಲಕರ ಸಂಘದ ಅಧ್ಯಕ್ಷರುಗಳು ಸ್ಥಳೀಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *