ಪ್ರತಿ ವರ್ಷ ಜುಲೈ 1 ರಂದು ನಾವು ಈ ದಿನವನ್ನು ಆಚರಿಸುತ್ತೇವೆ. ಇದು ಕೇವಲ ಒಂದು ದಿನದ ಆಚರಣೆಯಲ್ಲ; ಇದು ನಮ್ಮ ವೃತ್ತಿಯ ಘನತೆ, ಜವಾಬ್ದಾರಿ ಮತ್ತು ದೇಶದ ಆರ್ಥಿಕತೆಗೆ ನಾವು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸುವ ದಿನವಾಗಿದೆ.
ದೇಶದ ಆರ್ಥಿಕ ಬೆನ್ನೆಲುಬಾಗಿ ನಿಲ್ಲುವ ನಮ್ಮ ವೃತ್ತಿಜೀವನದ ಬಗ್ಗೆ ನಮಗೆ ಸದಾ ಹೆಮ್ಮೆಯಿರಬೇಕು. ಭಾರತದ ಆರ್ಥಿಕತೆಯನ್ನು ಮುನ್ನಡೆಸುವಲ್ಲಿ, ತೆರಿಗೆ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ಕಾರ್ಪೊರೇಟ್ ವಲಯದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ಲೆಕ್ಕ ಪರಿಶೋಧಕರ ಪಾತ್ರ ಅತ್ಯಂತ ದೊಡ್ಡದಾಗಿದೆ
ಕರಾವಳಿ ಬೈಪಾಸ್ ಬಳಿಯರಂಜಿತಾ ಪ್ಯಾಲೇಸ್‌ಮಣಿಪಾಲಇನ್ ಹೊಟೇಲ್ ನ ಸಭಾಂಗಣದಲ್ಲಿ ಬುಧವಾರ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ ಶಾಖೆ ವತಿಯಿಂದ ನಡೆದ 78ನೇ ಲೆಕ್ಕಪರಿಶೋಧಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ನರೇಂದ್ರಮೋದಿಯವರುಮೊದಲ ಬಾರಿ ಪ್ರಧಾನಿಯಾದಾಗ ಭಾರತ ಜಾಗತಿಕ ಆರ್ಥಿಕ ಮಟ್ಟದಲ್ಲಿ 11ನೇ ಸ್ಥಾನದಲ್ಲಿತ್ತು. ಈಗ 4ನೇ ಸ್ಥಾನದಲ್ಲಿದೆ. 2047ರ ವೇಳೆಗೆ ಭಾರತ 1ನೇ ಸ್ಥಾನಕ್ಕೆ ಏರಬೇಕಿದೆ. ಅದಕ್ಕೆ ಲೆಕ್ಕಪರಿಶೋಧಕರಸಹಕಾರ ಅಗತ್ಯ ಎಂದರು.
ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಐಸಿಎಐ ಉಡುಪಿ ಘಟಕದ ಅಧ್ಯಕ್ಷ ರಾಘವೇಂದ್ರ ಮೊಗೇ ರಾಯ, ಪ್ರಸ್ತಾವಿಸಿ, ಸ್ವಾಗತಿಸಿದರು.
ఐಸಿಎಐ ಉಡುಪಿ ಘಟಕದ ಉಪಾಧ್ಯಕ್ಷ ಅಶ್ವತ್ಥ ಜೆ. ಶೆಟ್ಟಿ ಕೋಶಾಧಿಕಾರಿ, ನಿಕಟಪೂರ್ವ ಅಧ್ಯಕ್ಷೆ ಅರ್ಚನಾ ಆರ್. ಮಯ್ಯ, ಸೋನಿತ್ ಶೆಟ್ಟಿ ಉಪಸ್ಥಿತರಿದ್ದರು ಕಾರ್ಯದರ್ಶಿ ಲಕ್ಷ್ಮೀಶ್ ರಾವ್ ನಿರೂಪಿಸಿ, ವಂದಿಸಿದರು.ಮಾಜಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಗೌರವಾರ್ಪಣೆ
ಲೆಕ್ಕಪರಿಶೋಧಕರ ದಿನಾಚರಣೆ ಪ್ರಯುಕ್ತ ಹಿರಿಯ ಲೆಕ್ಕಪರಿಶೋಧಕ ರಾದ ಕೆ. ಅನಂತ ನಾರಾಯಣ ಪೈ ಹಾಗೂ ಪ್ರಭಾತ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಉಡುಪಿ ಘಟಕದ ಸದಸ್ಯರು, ಕುಟುಂಬದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು.


