×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉದ್ಯವಾರ ಜಯಲಕ್ಷ್ಮಿ ಜವಳಿ ಮಳಿಗೆಗೆ ನುಗ್ಗಿದ ಕಳ್ಳರು 60 ಲಕ್ಷ ರೂ ಕಳವು

ಕಾಪು : ಉದ್ಯಾವರದ ಜಯಲಕ್ಷ್ಮಿ ಜವಳಿ ಮಳಿಗೆಯೊಂದಕ್ಕೆ ನುಗ್ಗಿದ ಕಳ್ಳರು 60 ಲಕ್ಷ ರೂಪಾಯಿ ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಮಾರ್ಚ್ 15 ರಂದು ರಾತ್ರಿ 01.25 ರಿಂದ 03. 30 ರ ವೇಳೆ ನೆಲಮಹಡಿಯ ವಾಶ್ ರೂಂ ಗೆ ಅಳವಡಿಸಿದ ಎಕ್ಸಾಸ್ಟ್ ಫ್ಯಾನನ್ನು ಕಿತ್ತು ಅದರ ಮೂಲಕ ಬಟ್ಟೆ ಅಂಗಡಿಯ ಒಳಪುವೇಶಿಸಿದ ಕಳ್ಳರು  ಅಂಗಡಿಯ ನೆಲಮಹಡಿಯ ಕ್ಯಾಶ್‌ ಕೌಂಟರ್‌ಗೆ ಬಂದು ಅಲ್ಲಿರುವ ಚಿಲ್ಲರೆ ಹಣವನ್ನು ತೆಗೆದುಕೊಂಡು ಬಳಿಕ ಮಹಡಿಯ ಕಚೇರಿಗೆ ಬಂದಿದ್ದಾರೆ. ಅಲ್ಲಿನ ಪಿಂಗರ್ ಪ್ರಿಂಟ್ ಇರುವ ಸೇಫ್ ಲಾಕರ್‌ನ ಕೀಯನ್ನು ತಂದು ಕಚೇರಿಯ ಇನ್ನೊಂದು ಸೇಫ್‌ ಲಾಕರ್‌ನ್ನು ತೆರೆದು ಅದರಲ್ಲಿದ್ದ ಹಣದ ಸೇಫ್ ಲಾಕರ್ ಕೀ ತೆಗೆದು ಅದರ ಮೂಲಕ ಹಣವಿಟ್ಟಿದ ಇನ್ನೊಂದು ಸೇಫ್ ಲಾಕರ್‌ನ್ನು ತೆರೆದು ಅದರಲ್ಲಿದ್ದ 60 ಲಕ್ಷ ರೂಪಾಯಿ ನಗದನ್ನು ಕಳವು ಮಾಡಿಕೊಂಡು ಹೋಗಲಾಗಿದೆ. ಈ ಬಗ್ಗೆ, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *