
ಚಾಲಕನ ನಿಯಂತ್ರಣ ತಪ್ಪಿ ಡಾಬಾಕ್ಕೆ ನುಗ್ಗಿದ ಪರಿಣಾಮ ಗ್ರಾಹಕರೊಬ್ಬರಿಗೆ ಗಂಭೀರವಾಗಿ ಗಾಯವಾದ ಘಟನೆ ಮಾವಿನಕಟ್ಟೆ ಕ್ರಾಸ್ ಬಳಿ ಸೋಮವಾರ ನಡೆದಿದೆ. ಮಹಮ್ಮದ್ ಹನೀಫ್ ಮಾಲಕತ್ವದ ಮಾವಿನಕಟ್ಟೆಯ ಸರ್ಕಲ್ ಬಳಿಯಿದ್ದ ಸ್ವೀಕಾರ್ ಫ್ಯಾಮಿಲಿ ಡಾಬಾದೊಳಗೆ ಕುಂದಾಪುರದಿಂದ ಗುಲ್ವಾಡಿಯತ್ತ ಸಾಗಿಸುತ್ತಿದ್ದ ಟಿಪ್ಪರ್ ಏಕಾಏಕಿ ನುಗ್ಗಿದೆ. ಈ ವೇಳೆ ಡಾಬಾದಲ್ಲಿದ್ದ ಹನೀಫ್ ಹಾಗೂ ಅವರ ಮಗ ನಿಜಾಮುದ್ದೀನ್ ಪಾರಾಗಿದ್ದು, ಗ್ರಾಹಕ ಅಬಿದ್ದಿನ್ ಅವರಿಗೆ ಗಂಭೀರ ಗಾಯಗಳಾಗಿದೆ. ಚಾಲಕನ ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಿಂದ ಹೊಟೇಲ್ ಒಳಗಿದ್ದ ಸಾಮಗ್ರಿಗಳು ಜಖಂ ಗೊಂಡಿದ್ದು 3 ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

