×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹಾಲಿನ ದರ ಹೆಚ್ಚಿಸಿದ ಕೆಎಂಎಫ್: ಜಂಬೋ ಪ್ಯಾಕ್‌ ದರ ಏರಿಕೆ

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಾಳೆಯಿಂದಲೇ (ಫೆ.11) ಜಂಬೋ ಪ್ಯಾಕೆಟ್ ಹಾಲಿನ ದರ 3 ರೂ. ಹೆಚ್ಚಿಸಿದೆ.ಹೊಸ ದರದ ಪ್ರಕಾರ, 6‌ ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರ 231 ರೂ.ಯಿಂದ 234‌ ರೂ.ಗೆ ಹೆಚ್ಚಳವಾಗಲಿದೆ. ದರ ಹೆಚ್ಚಳ ಕುರಿತಂತೆ ಕೆಎಂಎಫ್ ಅಂಗಸಂಸ್ಥೆ ಬಮುಲ್‌ನಿಂದ‌ ಪ್ರಕಟಣೆ ಹೊರಬಿದ್ದಿದ್ದು, ನಾಳೆಯಿಂದ ಮಾರುಕಟ್ಟೆಗೆ ಹೊಸ ಮುದ್ರಿತ ಪ್ಯಾಕೆಟ್ ಮಾರಾಟವಾಗಲಿದೆ. ಈಗಾಗಲೇ ಬೆಲೆ ಮುದ್ರಿತ ಪ್ಯಾಕೆಟ್ಗಳು ಹಳೇ ಬೆಲೆಯಲ್ಲಿಯೇ ಮಾರಾಟ ಮಾಡಬೇಕು ಎಂದು ರಿಟೇಲ್, ಫ್ರಾಂಚೈಸಿ, ಔಟ್ಲೆಟ್ದಾರರಿಗೆ ತಿಳಿಸಿದೆ.ಕಳೆದ ನವೆಂಬರ್‌ನಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಪ್ರತಿ ಲೀಟರ್ ಹಾಲು ಮತ್ತು ಮೊಸರು ದರವನ್ನು 2 ರೂ. ಹೆಚ್ಚಳ ಮಾಡಿತ್ತು. ಇದೀಗ ಕೆಎಂಎಫ್ 6‌ ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರವನ್ನು ಹೆಚ್ಚಿಸಿದೆ.

Leave a Reply

Your email address will not be published. Required fields are marked *