×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ತಾಲೂಕು ಮುಸ್ಲಿಂ ಮುಖಂಡರಿಂದ ಫಾರೂಕ್ ಚಂದ್ರನಗರ ರಿಗೆ ಸನ್ಮಾನ

ಕಾಪು : ಕಾಪು ತಾಲೂಕು ಮುಸ್ಲಿಂ ಮುಖಂಡರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಕ್ಕೆ ರಾಜ್ಯ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ ಫಾರೂಕ್ ಚಂದ್ರನಗರರಿಗೆ ಸನ್ಮಾನ ಕಾರ್ಯಕ್ರಮವನ್ನು ಬಟರ್ ಫ್ಲೈ ಗೆಸ್ಟ್ ಹೌಸ್ ನಲ್ಲಿ ನೂರಾರು ಗಣ್ಯರ ಸಮ್ಮುಖದಲ್ಲಿ ಮಾಡಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ ವಕ್ತಾರ ಅಬ್ದುಲ್ ಮುನೀರ್ ಫಾರೂಕ್ ಚಂದ್ರನಗರ ಕಾಂಗ್ರೆಸ್ ಪಕ್ಷದಲ್ಲಿ 18 ವರ್ಷದಿಂದ ಸಾಮಾನ್ಯ ಕಾರ್ಯಕರ್ತರಾಗಿ ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಹಲವಾರು ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಈ ಮೊದಲು 2 ಬಾರಿ ಕೆಪಿಸಿಸಿ ಅಲ್ಪ ಸಂಖ್ಯಾತ ಸದಸ್ಯರಾಗಿ ಇದೀಗ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ್ದು ಮುಂದೆಯೂ ಪಕ್ಷದಲ್ಲಿ ಇನ್ನು ಉತ್ತಮ ಕೆಲಸ ಮಾಡಿ ಅತ್ಯುನ್ನತ ಹಂತಕ್ಕೆ ತಲುಪಲಿ ಎಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಕೆಪಿಸಿಸಿ ಕೋ-ಒರ್ಡಿನೆಟರ್ ಅಬ್ದುಲ್ ಅಝೀಜ್ ಹೆಜಮಾಡಿ, ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಶರ್ಫುದ್ದಿನ್ ಶೇಕ್ ಮಜೂರು, ಕಾಪು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ರಮೀಜ್ ಹುಸೈನ್ ಪಡುಬಿದ್ರೆ,ಕಾಪು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಯು.ಸಿ ಶೇಖಬ್ಬ,ಕಾಪು ಪುರಸಭೆ ಮಾಜಿ ಉಪಾಧ್ಯಕ್ಷರಾದ ಉಸ್ಮಾನ್ ಕೊಪ್ಪಲಂಗಡಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯದರ್ಶಿ ಶಂಶುದ್ಧಿನ್ ಮಜೂರು,ಪೊಲಿಪು ಜಾಮಿಯಾ ಮಸ್ಜಿದ್ ಅಧ್ಯಕ್ಷ ಹೆಚ್. ಅಬ್ದುಲ್ಲ, ಕಾಂಗ್ರೆಸ್ ಮುಖಂಡ ಮನ್ಸೂರ್ ಮೆಕ್ಕಾಸ್ ಮೂಳೂರು,ಕಾಪು ಮುಸ್ಲಿಂ ಒಕ್ಕೂಟ ಅಧ್ಯಕ್ಷರಾದ ನಸೀರ್ ಕೊಂಬಗುಡ್ಡೆ, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹಸನಬ್ಬ ಶೇಕ್,ಕಾಪು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಮಿರ್ ಮೊಹಮ್ಮದ್, ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಝುಬೈರ್ ಅಹ್ಮದ್ ಶಿರ್ವ, ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಇಮ್ರಾನ್ ಮಜೂರು, ಸಾಹಿತಿ-ಚಿಂತಕ ಅಶ್ರಫ್ ಕರಂದಾಡಿ, ಪಡುಬಿದ್ರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಹಸನ್ ಕಂಚಿನಡ್ಕ, ಕಾಂಗ್ರೆಸ್ ಮುಖಂಡ ರೆಹ್ಮನ್ ಹೆಜಮಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *