×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಲ್ನಡಿಗೆ ಹಜ್ ಯಾತ್ರೆ ಹೊರಟ ಯುವಕನಿಗೆ ಫಾರೂಕ್ ಚಂದ್ರನಗರ ರವರ ಬಟರ್ ಫ್ಲೈ ಗೆಸ್ಟ್ ಹೌಸ್ನಲ್ಲಿ ವಾಸ್ತವ್ಯ ವ್ಯವಸ್ಥೆ

ಕಾಪು ಕಾಲ್ನಡಿಗೆಯಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಉಪ್ಪಿನಂಗಡಿಯ ಯುವಕ ನೌಶಾದ್ ಬಿ.ಕೆ.ಎಸ್ ನೂತನವಾಗಿ ಪ್ರಾರಂಭವಾದ ಕಾಪು-ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್ ನಲ್ಲಿ ವಿಶ್ರಾಂತಿಗಾಗಿ ಅವರಿಗೆ ಭೋಜನ ಹಾಗೂ ತಂಗುವ ವ್ಯವಸ್ಥೆ ಬಟರ್ ಫ್ಲೈ ಗೆಸ್ಟ್ ಹೌಸ್ ಆಡಳಿತ ನಿರ್ದೇಶಕ ಫಾರೂಕ್ ಚಂದ್ರನಗರ ಮಾಡಿದರು ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಸಮಾಜ ಸೇವಕರಾದ ಮೂಸ ಮಜೂರು ನೌಶಾದ್ ಬಿ.ಕೆ.ಎಸ್ ರವರಿಗೆ ಸನ್ಮಾನಿಸಿ ಗೌರವಿಸಿದರು ಮಾತನಾಡಿದ ಅವರು ಮುಸ್ಲಿಂಮರಿಗೆ ಹಜ್ ಯಾತ್ರೆ ಕಡ್ಡಾಯವಾಗಿದೆ ಆ ಭಾಗ್ಯ ಎಲ್ಲಾ ಜನರಿಗೂ ಸಿಗಲಿ ನೌಶಾದ್ ರವರ ಕಾಲ್ನಡಿಗೆ ಯಾತ್ರೆ ಶುಭವಾಗಲಿ ಎಂದರು
ಈ ಸಂದರ್ಭದಲ್ಲಿ ಉದ್ಯಮಿ ಕೆ. ಉಮ್ಮರಬ್ಬ ಚಂದ್ರನಗರ, ಸಮಾಜ ಸೇವಕ ಶರ್ಫುದ್ದಿನ್ ಶೇಕ್ ಮಜೂರು,ಸಾಹಿತಿ- ಚಿಂತಕ ಅಶ್ರಫ್ ಕರಂದಾಡಿ, ಅಬ್ದುಲ್ ಇಲ್ಯಾಸ್ ಮಜೂರು,ಫೈಸಲ್ ಕಾರಂದಾಡಿ ಸಮದ್ ಮಲ್ಲಾರ್,ಲುಕ್ಮನ್ ಮಜೂರು, ಕಾಪು ಸಾದಿಕ್ ಸಾಹಿಲ್ ಫೇಬ್ರಿಕೇಟರ್ಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *