
ಕಟಪಾಡಿಯ ವೇಣಿ ಗಿರಿ ಶ್ರೀ ಕಾಳಿಕಾಂಬ ವಿಶ್ವಕರ್ಮ ದೇವಸ್ಥಾನದಲ್ಲಿ ಫೆಬ್ರವರಿ 5ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದೆ ಎಂದು ದೇವಳದ ಆಡಳಿತ ಮೊಕ್ತಸರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನವೀನ್ ಆಚಾರ್ಯ ಪಡುಬಿದ್ರಿ ಅವರು ಇಂದು ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಫೆಬ್ರವರಿ 5 ರಂದು ಬೆಳಿಗ್ಗೆ 8.30 ಕ್ಕೆ ಕಲಶಾಭಿಷೇಕ ಆರಂಭಗೊಂಡು 9.10ಕ್ಕೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು.ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ಮಹಾ ಅನ್ನಸಂತರ್ಪಣೆ ಜರಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಾಲಕೃಷ್ಣ ಆಚಾರ್ಯ ಬೆಳಪು, ಕರಂಬಳಿ ವಿಶ್ವನಾಥ ಆಚಾರ್ಯ, ದಾಮೋದರ್ ಎಲ್ ಆಚಾರ್ಯ,ವಿಜಯ ಆಚಾರ್ಯ ಪಡುಬಿದ್ರಿ ಬಿ. ಸುರೇಶ ಆಚಾರ್ಯ, ಸುಧಾಕರ್ ಆಚಾರ್ಯ ಬಿಳಿಯೂರು, ಉಪಸ್ಥಿತರಿದ್ದರು.

